ನವದೆಹಲಿ: ನಿರ್ದೇಶಕ ಸಾಜಿದ್ ಖಾನ್ (Sajid Khan) ವಿರುದ್ಧ ಕೆಲ ನಟಿಯರು ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಆರೋಪದ ಬಳಿಕ ಸಾಜಿದ್ ಜನಪ್ರಿಯತೆ ಬಹಳಷ್ಟು ಕುಗ್ಗಿತ್ತು. ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳದ ಸಾಜಿದ್ ಖಾನ್ ಇದೀಗ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಬೀರಿದ ತೀವ್ರ ಪರಿಣಾಮದ ಬಗ್ಗೆ ಹೇಳಿಕೊಂಡಿದ್ದಾರೆ.
ಬಾಲಿವುಡ್‌ನಲ್ಲಿ MeToo ಅಭಿಯಾನದ ಸಮಯದಲ್ಲಿ ಅನೇಕ ಆರೋಪಗಳನ್ನು ಎದುರಿಸಿದ ನಟ ನಿರ್ದೇಶಕ ಸಾಜಿದ್ ಖಾನ್ ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳನ್ನು ಎದರುರಿಸಬೇಕಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕಳೆದ ಆರು ವರ್ಷಗಳಲ್ಲಿ ನಾನು ಮಾನಸಿಕ ಮತ್ತು ಭಾವನಾತ್ಮಕವಾಗಿ ತುಂಬಾ ನೊಂದಿದ್ದೇನೆ. ಹೀಗಾಗಿ ಆರು ವರ್ಷಗಳಲ್ಲಿ ನನ್ನ ಜೀವನವನ್ನು ಹಲವು ಬಾರಿ ಕೊನೆಗೊಳಿಸಲು ನಾನು ಯೋಚಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.
2018ರಲ್ಲಿ ಸಾಜಿದ್ ಖಾನ್ ಅವರು ಮೀಟೂ ಅಭಿಯಾನದಲ್ಲಿ ದೊಡ್ಡ ಆರೋಪಕ್ಕೆ ಒಳಗಾಗಿದ್ದರು. 10ಕ್ಕೂ ಅಧಿಕ ಮಹಿಳೆಯರು ಅವರ ವಿರುದ್ಧ ಲೈಂಗಿಕ ಆರೋಪ ಮಾಡಿ ಸಾಜಿದ್ ಖಾನ್ ಹೌಸ್‌ಫುಲ್ 4 ಸಿನಿಮಾ ನಿರ್ದೇಶನದಿಂದ ದೂರ ಸರಿಯುವಂತೆ ಆಯಿತು. ಹಿಂದಿ ಬಿಗ್ ಬಾಸ್ 16ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿರುವುದಕ್ಕೆ ನಟಿಯರು ಮತ್ತೆ ಸಾಜಿದ್ ವಿರುದ್ಧ ಧ್ವನಿ ಎತ್ತಿ, ಅವರನ್ನು ಕಾರ್ಯಕ್ರಮದಿಂದ ಹೊರ ಕಳುಹಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಮಾತನಾಡಿದ ಸಾಜಿದ್ ನಾನು ನನ್ನ ಜೀವನವನ್ನು ಕೊನೆಗೊಳಿಸಲು ಬಯಸುವ ಹಂತಕ್ಕೆ ಬಂದರೂ ನನಗೆ ಯಾರ ಮೇಲೂ ದ್ವೇಷವಿಲ್ಲ. ಜೋ ಕಿಸ್ಮತ್ ಮೇ ಲಿಖಾ ಹೋತಾ ಹೈ, ವೋ ಹೋತಾ ಹೈ, ನಾನು ಬಹಳಷ್ಟು ಸಹಿಸಿಕೊಂಡಿದ್ದೇನೆ ಎಂದಿದ್ದಾರೆ.ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘದಿಂದ (IFTDA) ಅನುಮತಿ ಪಡೆದಿದ್ದರೂ ಕೂಡ ಸಾಜಿದ್ ಮತ್ತೆ ಉದ್ಯಮದಲ್ಲಿ ನೆಲೆ ಕಂಡುಕೊಳ್ಳಲು ತೀವ್ರ ಕಷ್ಟ ಪಟ್ಟಿದ್ದಾರೆ. ಆರ್ಥಿಕ ಒತ್ತಡವು ತನ್ನ ಮನೆಯನ್ನು ಮಾರಿ ಬಾಡಿಗೆ ಅಪಾರ್ಟ್ಮೆಂಟ್ ಗೆ ತೆರಳುವಂತೆ ಆಯಿತು. 14 ನೇ ವಯಸ್ಸಿನಿಂದ, ನಾನು ನನ್ನ ಕುಟುಂಬಕ್ಕಾಗಿ ಸಂಪಾದಿಸುತ್ತಿದ್ದೇನೆ” ಈಗಲೂ ನನ್ನ ಮನೆಯ ಜವಾಬ್ದಾರಿ ಹೆಚ್ಚಾಗಿದೆ ಎಂದು ನೆನಪಿಸಿಕೊಂಡಿದ್ದಾರೆ.
ಇಷ್ಟು ದಿನ ಮೌನವಾಗಿರಲು ನೀವು ಯಾಕೆ ಆರಿಸಿಕೊಂಡಿದ್ದೀರಿ?ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಾಜೀದ್ ನನಗೆ ಮಾತನಾಡಲು ಇಷ್ಟವಿರಲಿಲ್ಲ. ಮೌನವೇ ಬಂಗಾರ ಎಂದು ಅಮ್ಮ ಹೇಳಿದ್ದರು. ಹೀಗಾಗಿ ಮೌನ ವಾಗಿದ್ದೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: BBK 11: ತಾಯಿಯ ಧ್ವನಿ ಕೇಳಿ ಇಡೀ ಬಿಗ್ ಬಾಸ್ ಮನೆ ಸುತ್ತಿದ ಉಗ್ರಂ ಮಂಜು