Saturday, 14th December 2024

ವಿದ್ಯುತ್ ಸಮಸ್ಯೆಗೆ ಧೋನಿ ಪತ್ನಿ ಸಾಕ್ಷಿ ಬೇಸರ

ರಾಂಚಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಧೋನಿ ಅವರು ವಿದ್ಯುತ್ ಸಮಸ್ಯೆ ಯಿಂದ ತೀವ್ರವಾಗಿ ಬೇಸರ ಗೊಂಡಿದ್ದಾರೆ !

ಜಾರ್ಖಂಡ್‌ ರಾಜ್ಯದಲ್ಲಿ ನಿರಂತರ ಲೋಡ್ ಶೆಡ್ಡಿಂಗ್‌ನಿಂದಾಗಿ ಸಾಮಾನ್ಯ ಜನರು ಮಾತ್ರವಲ್ಲದೇ ಶ್ರೀಮಂತರು ಕೂಡ ಸಮಸ್ಯೆ ಎದುರಿಸುವಂತಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಾಕ್ಷಿ ಸಿಂಗ್ ಅವರು ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್‌ನ ತೆರಿಗೆ ಪಾವತಿದಾಳಾಗಿರುವ ನನಗೆ ಜಾರ್ಖಂಡ್‌ನಲ್ಲಿ ವಿದ್ಯುತ್ ಸಮಸ್ಯೆ ಏಕೆ ಇದೆ ಎಂದು ತಿಳಿಯಲು ಬಯಸು ತ್ತೇನೆ ಎಂದು ಪ್ರಶ್ನಿಸಿದ್ದಾರೆ.