Friday, 22nd November 2024

Salaar v/s Dunki: ವರ್ಷದ ಬಳಿಕ ಶಾರುಖ್ ಖಾನ್‌ ಕ್ಷಮೆ ಕೇಳಿದ ಪ್ರಶಾಂತ್ ನೀಲ್!

Salaar v/s Dunki

ಶಾರುಖ್ ಖಾನ್ (Shah Rukh Khan) ಅಭಿನಯದ ಡುಂಕಿ ಮತ್ತು ಪ್ರಭಾಸ್ (Prabhas) ಅವರ ಸಲಾರ್ ಚಿತ್ರ (Salaar v/s Dunki) ಬಿಡುಗಡೆಯ ಸಂದರ್ಭದಲ್ಲಿ ಬಾಕ್ಸ್ ಆಫೀಸ್‌ನಲ್ಲಿ (box office) ಘರ್ಷಣೆಗೆ ಒಳಗಾಗಿತ್ತು. ಇದಾಗಿ ಒಂದು ವರ್ಷಗಳ ಬಳಿಕ ʼಸಲಾರ್‌ʼನ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರು ಶಾರುಖ್ ಸೇರಿದಂತೆ ಡುಂಕಿ ಚಿತ್ರ ತಂಡದ ಬಳಿ ಕ್ಷಮೆಯಾಚಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಶಾಂತ್ ನೀಲ್, ನಾವು ಡುಂಕಿ ತಂಡದ ಬಳಿ ಕ್ಷಮೆಯಾಚಿಸುತ್ತಿದ್ದೇವೆ. ಅವರು ಮೊದಲು ದಿನಾಂಕವನ್ನು ಘೋಷಿಸಿದ್ದರು. ಯಾರೇ ಆಗಿರಲಿ ಬೇರೆಯವರು ಘೋಷಿಸಿರುವ ದಿನಾಂಕಕ್ಕೆ ತಮ್ಮ ಚಿತ್ರವನ್ನು ಘೋಷಿಸುವುದು ಸರಿಯಲ್ಲ ಎಂದು ಹೇಳಿದರು. ಶಾರುಖ್ ಖಾನ್ ಅವರ ಡುಂಕಿ ಮತ್ತು ಪ್ರಭಾಸ್ ಅವರ ಸಲಾರ್ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿಗೊಳಗಾಗಿ ಸುಮಾರು ಒಂದು ವರ್ಷವಾಗಿದ್ದು, ಬಳಿಕ ಇದೀಗ ʼಸಲಾರ್ʼ ನಿರ್ದೇಶಕ ಪ್ರಶಾಂತ್ ನೀಲ್ ಕ್ಷಮೆ ಕೇಳಿ, ಅದೇ ದಿನ ತಮ್ಮ ಚಿತ್ರ ಬಿಡುಗಡೆಗೆ ಜ್ಯೋತಿಷ್ಯ ಕಾರಣ ಎಂದು ಹೇಳಿದ್ದಾರೆ.

ಇನ್ನೊಬ್ಬ ಚಲನಚಿತ್ರ ನಿರ್ಮಾಪಕ ಈಗಾಗಲೇ ಬುಕ್ ಮಾಡಿದ ದಿನಾಂಕದಂದು ಚಲನಚಿತ್ರವನ್ನು ಬಿಡುಗಡೆ ಮಾಡುವುದು ಒಳ್ಳೆಯ ವಿಷಯವಲ್ಲ ಎಂಬುದನ್ನು ಪ್ರಶಾಂತ್ ಒಪ್ಪಿಕೊಂಡ ಅವರು, ಆದರೆ ನಮಗೆ ಬೇರೆ ಆಯ್ಕೆಗಳು ಇರಲಿಲ್ಲ ಎಂದರು.ನಮಗಿದ್ದ ಏಕೈಕ ದಿನಾಂಕ ಅದಾಗಿತ್ತು. ಅವರು ಒಂದು ವರ್ಷದ ಹಿಂದೆಯೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದರು ಎಂದು ಅವರು ಹೇಳಿದರು. ಅಂತಹ ಪರಿಸ್ಥಿತಿ ಬರಬಾರದಿತ್ತು. ಜ್ಯೋತಿಷ್ಯದಿಂದಲೇ ಹೀಗಾಗಿದೆ ಎಂದು ಅವರು ತಿಳಿಸಿದರು. ಡುಂಕಿ ಮತ್ತು ಸಲಾರ್ ಈ ಎರಡೂ ಚಿತ್ರಗಳು 2023ರ ಡಿಸೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಮೆಗಾ ಬ್ಲಾಕ್‌ಬಸ್ಟರ್‌ಗಳಾದ ಪಠಾನ್, ಜವಾನ್ ಬಳಿಕ ಡುಂಕಿ ಶಾರುಖ್ ಅವರ ಆ ವರ್ಷದ ಮೂರನೇ ಚಿತ್ರವಾಗಿತ್ತು. ಆದಿಪುರುಷ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತಿದ್ದರಿಂದ ಸಲಾರ್ ಪ್ರಭಾಸ್‌ಗೆ ನಿರ್ಣಾಯಕ ಚಿತ್ರವಾಗಿತ್ತು. ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಚಿತ್ರಮಂದಿರಗಳಲ್ಲಿ ಪ್ರಬಲ ಪೈಪೋಟಿಯನ್ನು ಎದುರಿಸಬೇಕಾಯಿತು.

Kanguva Movie: ಸೂರ್ಯ ಅಭಿನಯದ ಬಹು ನಿರೀಕ್ಷಿತ ‘ಕಂಗುವ’ 6000 ಚಿತ್ರಮಂದಿರಗಳಲ್ಲಿ ರಿಲೀಸ್‌!

85 ಕೋಟಿ ರೂ. ಬಜೆಟ್‌ನ ಡುಂಕಿ ವಿಶ್ವದಾದ್ಯಂತ ಒಟ್ಟು 475 ಕೋಟಿ ರೂ. ಆದಾಯ ಗಳಿಸಿದೆ. 270 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾದ ಸಾಲಾರ್ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 611.8 ಕೋಟಿ ರೂ. ಗಳಿಸಿತ್ತು. ಈ ಚಿತ್ರವು 2023 ರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿತು.