ನವದೆಹಲಿ: ಜೆಟ್ ಏರ್ ವೇಸ್ ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸಂಜೀವ್ ಕಪೂರ್ ಅವರನ್ನು ನೇಮಕ ಮಾಡಲಾಗಿದೆ.
ಕಪೂರ್ ಈ ಹಿಂದೆ ಭಾರತೀಯ ಪೂರ್ಣ ಸೇವಾ ವಾಹಕ ವಿಸ್ಟಾರಾ ಮತ್ತು ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ನೊಂದಿಗೆ ಇದ್ದರು. ಜೆಟ್ ಏರ್ ವೇಸ್ ಆರ್ಥಿಕ ಕುಸಿತದಿಂದಾಗಿ 17 ಏಪ್ರಿಲ್ 2019 ರಂದು ನೆಲಕ್ಕೆ ಕುಸಿದಿತ್ತು. ಜೂನ್ 2021 ರಲ್ಲಿ, ಯುಎಇ ಮೂಲದ ಉದ್ಯಮಿ ಮುರಾರಿ ಲಾಲ್ ಜಲನ್ ಮತ್ತು ಯುಕೆ ಮೂಲದ ಕಲ್ರಾಕ್ ಕ್ಯಾಪಿಟಲ್ ಒಳಗೊಂಡ ಜಲನ್-ಕಲ್ರಾಕ್ ಒಕ್ಕೂಟವು ಸಲ್ಲಿಸಿದ ನಿರ್ಣಯ ಯೋಜನೆಯನ್ನು ಎನ್ ಸಿಎಲ್ ಟಿ ಅನುಮೋದಿಸಿತು.
ಈ ಬಳಿಕ, ಇದೀಗ ಆರ್ಥಿಕ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಜೆಟ್ ಏರ್ ವೇನ್ ನ ನೂತನ ಸಿಇಓ ಆಗಿ ಸಂಜೀವ್ ಕಪೂರ್ ಅವರನ್ನು ನೇಮಕ ಮಾಡಲಾಗಿದೆ.