ನವದೆಹಲಿ: ಹರಿಯಾನ್ವಿ ಡ್ಯಾನ್ಸರ್ (haryanvi dancer) ಸಪ್ನಾ ಚೌಧುರಿ (Sapna Choudhary) ಅವರ ತೇರಿ ಆಖ್ಯ ಕಾ ಯೋ ಕಾಜಲ್.. ವಿಡಿಯೋ ಯೂಟ್ಯೂಬ್ ನಲ್ಲಿ ಭಾರಿ ಟ್ರೆಂಡಿಂಗ್ನಲ್ಲಿದೆ. ಈಗಾಗಲೇ ಇದನ್ನು 52.3 ಕೋಟಿ ಮಂದಿ ವೀಕ್ಷಿಸಿದ್ದಾರೆ.
ಸಪ್ನಾ ಚೌಧರಿ ಅವರ ಹಾಡುಗಳು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತವೆ. ಸಪ್ನಾ ಚೌಧರಿ ವೇದಿಕೆಗೆ ಬಂದಾಗಲೆಲ್ಲಾ ಅವರು ತಮ್ಮ ನೃತ್ಯದ ಮೂಲಕ ಎಲ್ಲರ ಮನಸೂರೆಗೊಳಿಸುತ್ತಾರೆ. ಸಪ್ನಾ ಚೌಧರಿ ಹರಿಯಾಣದಲ್ಲಿ ಮಾತ್ರವಲ್ಲ ರಾಷ್ಟ್ರವ್ಯಾಪಿಯಾಗಿ ಪ್ರಸಿದ್ಧರಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಕಾಣಿಸಿಕೊಂಡ ಸಪ್ನಾ ಚೌಧರಿ ಬಳಿಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.
ಸಪ್ನಾ ಚೌಧರಿ ಅವರ ತೇರಿ ಆಖ್ಯ ಕಾ ಯೋ ಕಾಜಲ್.. ಹಾಡು ಯೂಟ್ಯೂಬ್ನಲ್ಲಿ ಜನರ ಮೊದಲ ಆಯ್ಕೆಯಾಗಿದೆ. ಇದನ್ನು ಅನೇಕ ಯೂಟ್ಯೂಬ್ ಚಾನೆಲ್ಗಳಿಗೆ ಅಪ್ಲೋಡ್ ಮಾಡಲಾಗಿದೆ. ಆದರೆ ಇದು ಇಂದು ಕೇವಲ ಒಂದು ಚಾನೆಲ್ ನಲ್ಲಿ 52.3 ಕೋಟಿ ವೀಕ್ಷಣೆಗಳನ್ನು ಪಡೆದಿದೆ. ಈ ಹಾಡು ವೀಕ್ಷಣೆ ವಿಷಯದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ.
ಆರು ವರ್ಷಗಳ ಹಿಂದೆ ಸೊನೊಟೆಕ್ ಪಂಜಾಬಿ ಚಾನೆಲ್ ಸಪ್ನಾ ಚೌಧರಿ ಅವರ ಈ ಹಾಡನ್ನು ಹಂಚಿಕೊಂಡಿದೆ. ಅಂದಿನಿಂದ ಈ ಹಾಡು ಮತ್ತು ಸಪ್ನಾ ಚೌಧರಿ ಅವರ ನೃತ್ಯವನ್ನು ಈ ಚಾನಲ್ನಲ್ಲಿ 53.7 ಕೋಟಿ ವೀಕ್ಷಣೆ ಪಡೆದಿದೆ. ಇದನ್ನು 2.3 ಮಿಲಿಯನ್ಗಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಈ ವೀಡಿಯೊದಲ್ಲಿ, ಸಪ್ನಾ ಚೌಧರಿ ಅವರು ಕಪ್ಪು ಸಲ್ವಾರ್ ಸೂಟ್ ಧರಿಸಿ ಸಾವಿರಾರು ಜನರ ಗುಂಪಿನಲ್ಲಿ ನೃತ್ಯ ಮಾಡುತ್ತಿದ್ದಾರೆ. ಸಪ್ನಾ ಚೌಧರಿ ಅವರ ಈ ನೃತ್ಯವನ್ನು ನೋಡಿದ ಅನೇಕ ಪ್ರೇಕ್ಷಕರು ಮತ್ತೆ ನೃತ್ಯ ಮಾಡಲು ಒತ್ತಾಯಿಸಿದರು.
Viral Video: ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಸಿಕ್ತು ಸಿಗರೇಟ್ ತುಂಡು… ಗ್ರಾಹಕನಿಗೆ ಫುಲ್ ಶಾಕ್! ವಿಡಿಯೊ ಇದೆ
ಸಪ್ನಾ ಚೌಧರಿ ಹರಿಯಾಣದ ರೋಹ್ಟಕ್ನಲ್ಲಿ ತಮ್ಮ ಅಧ್ಯಯನವನ್ನು ಪ್ರಾರಂಭಿಸಿದರು. ಮೊದಲ ಕಾರ್ಯಕ್ರಮಕ್ಕೆ ಸಪ್ನಾ ಚೌಧರಿ ಹಣ ಪಡೆದಿರಲಿಲ್ಲ. ಆದರೆ ಇದಾದ ಅನಂತರ ಪ್ರತಿ ಕಾರ್ಯಕ್ರಮಕ್ಕೆ 3,100 ರೂ ಪಡೆದರು. ತಮ್ಮ ಆದಾಯದಿಂದ ಮನೆಯನ್ನು ನಡೆಸುತ್ತಿದ್ದ ಅವರು, ಆಗ ಸಪ್ನಾ ಚೌಧರಿ ವರ್ಷಕ್ಕೆ 30ರಿಂದ 35 ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ತಂದೆಯ ಮರಣದ ಅನಂತರ ಅವರು ಶಾಲೆ ಬಿಟ್ಟು ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡರು.