Saturday, 14th December 2024

ಸಂಗೀತ ಸಂಯೋಜಕ, ಗೀತರಚನೆಕಾರ ಸರೋಜ್ ಪಟ್ನಾಯಕ್ ಇನ್ನಿಲ್ಲ

ಮಯೂರ್‌ಭಂಜ್ (ಒಡಿಶಾ): ಸಂಗೀತ ಸಂಯೋಜಕ ಮತ್ತು ಗೀತರಚನೆಕಾರ ಸರೋಜ್ ಪಟ್ನಾಯಕ್(81) ಅವರು ಶುಕ್ರವಾರ ನಿಧನರಾಗಿದ್ದಾರೆ.

ಪಟ್ನಾಯಕ್ ಅವರು ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಜೂನ್ 2, 1940 ರಂದು ಜನಿಸಿದರು. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಅವರು ತಾವೇ ಹಾರ್ಮೋನಿಯಂ ನುಡಿಸುವುದನ್ನು ಕಲಿತರು. ನಂತರ ಆಕಾಶವಾಣಿ ಮತ್ತು ದೂರದರ್ಶನಕ್ಕೆ ಮೆಚ್ಚುಗೆ ಪಡೆದ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕರಾದರು.

ಪಟ್ನಾಯಕ್ ಅವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಹೆಸರಾಂತ ಗೀತರಚನೆಕಾರರಾಗಿ ಕೆಲಸ ಮಾಡುವ ಮೊದಲು 1977 ರಲ್ಲಿ ಒಡಿಯಾ ಸೂಪರ್ ಹಿಟ್ ಚಲನಚಿತ್ರ ‘ಅಭಿಮಾನ್’ ನಲ್ಲಿ ಸಂಗೀತ ಸಂಯೋಜಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು.