Tuesday, 7th January 2025

SBI Recruitment: ಸ್ಟೇಟ್‌ ಬ್ಯಾಂಕ್‌ನಲ್ಲಿ ಕ್ಲರ್ಕ್ ಹುದ್ದೆ ಖಾಲಿ! ಅರ್ಜಿ ಸಲ್ಲಿಕೆಗೆ ಜ.7 ಕೊನೆಯ ದಿನ

SBI Recruitment 2025

ನವದೆಹಲಿ: ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗುಡ್ ನ್ಯೂಸ್‌ ನೀಡಿದೆ. ಎಸ್ ಬಿಐ  ಪ್ರಸಕ್ತ  ಸಾಲಿನ  ಕ್ಲರ್ಕ್ ಹುದ್ದೆಗಳ ನೇಮಕಾತಿಗೆ (SBI Recruitment)  ಅಧಿಸೂಚನೆ ಹೊರಡಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು 13,735 ಹುದ್ದೆಗಳನ್ನು ಎಸ್​​ಬಿಐ ಭರ್ತಿ ಮಾಡಲು ನಿರ್ಧರಿಸಿದ್ದು ಕಸ್ಟಮರ್ ಸಪೋರ್ಟ್‌ ಮತ್ತು ಸೇಲ್ಸ್‌ ವಿಭಾಗದಲ್ಲಿ  ಕ್ಲೆರಿಕಲ್ ಕೇಡರ್‌ನ ಜೂನಿಯರ್ ಅಸೋಸಿಯೇಟ್ಸ್‌ ಹುದ್ದೆಗಳು ಖಾಲಿ ಇರಲಿದ್ದು ಅರ್ಜಿ ಸಲ್ಲಿಸಲು ಜನವರಿ 07 ಕೊನೆ ದಿನವಾಗಿದೆ. ದೇಶದ್ಯಾಂತ ಒಟ್ಟು 13,735 ಹುದ್ದೆಗಳು ಇರಲಿದ್ದು ಕೇಂದ್ರಾಡಳಿತ ಪ್ರದೇಶ ಲಡಾಖ್​ನಲ್ಲಿ 50 ಹುದ್ದೆ, ಕರ್ನಾಟಕದಲ್ಲಿ 203 ಹುದ್ದೆಗಳು ಖಾಲಿ ಇರಲಿದೆ.

ಶೈಕ್ಷಣಿಕ ಅರ್ಹತೆ ಏನು?

  • ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಮಾನ ವಿದ್ಯಾರ್ಹತೆ ಅಥವಾ  ಅಂತಿಮ ಸೆಮಿಸ್ಟರ್‌  ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು‌ 
  • ಅಭ್ಯರ್ಥಿಗಳು ಏಪ್ರಿಲ್ 1, 2024 ರಂತೆ 20 ರಿಂದ 28 ವರ್ಷ ವಯಸ್ಸಿನವರಾಗಿರಬೇಕು. ಅರ್ಜಿ ಹಾಕುವ ಅಭ್ಯರ್ಥಿಗಳ ಹುಟ್ಟಿದ ದಿನಾಂಕವು ಏಪ್ರಿಲ್ 2, 1996 ಮತ್ತು ಏಪ್ರಿಲ್ 1, 2004 ರ ನಡುವೆ ಇರಬೇಕು.
  • ಆಯ್ಕೆ ಪ್ರಕ್ರಿಯೆಗೆ   ಮೊದಲು ಪೂರ್ವಭಾವಿ ಪರೀಕ್ಷೆನಂತರ  ಮುಖ್ಯ ಪರೀಕ್ಷೆ  ಹಾಗೂ ಭಾಷಾ ಪ್ರಾವೀಣ್ಯತೆ ಪರೀಕ್ಷೆ ಎಂದು 3 ಹಂತದಲ್ಲಿ  ಪರೀಕ್ಷೆ  ನಡೆಯಲಿದೆ.

ಅರ್ಜಿ ಶುಲ್ಕ

ಅರ್ಜಿ ಸಲ್ಲಿಕೆಗೆ ಸಾಮಾನ್ಯ/OBC/EWS ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ   ರೂ 750 ಮೊತ್ತ ಸಲ್ಲಿಸಬೇಕು.  SC/ST ಮಾಜಿ ಸೈನಿಕ  ಅಭ್ಯರ್ಥಿಗಳಿಗೆ  ಶುಲ್ಕ ಪಾವತಿ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಕೆ ಮಾಡಲು ಮೊದಲಿಗೆ ಐಬಿಪಿಎಸ್‌ ವೆಬ್‌ ಪೋರ್ಟಲ್ https://ibpsonline.ibps.in ಇಲ್ಲಿಗೆ ಭೇಟಿ ನೀಡಿ‌ Click here For New Registration’ ಈ ಆಪ್ಚನ್ ಮೇಲೆ ಕ್ಲಿಕ್ ಮಾಡಿ. ಬಳಿಕ ಇಲ್ಲಿ  ರಿಜಿಸ್ಟ್ರೇಷನ್‌ ಪ್ರಕ್ರಿಯೆಗೆ ಕೇಳಲಾದ ದಾಖಲೆ ಮಾಹಿತಿ  ನೀಡಿ ನಂತರ ಮತ್ತೆ ಲಾಗಿನ್‌ ಆಗಿ ಅರ್ಜಿ ಸಲ್ಲಿಸಿ.

ಈ ಸುದ್ದಿಯನ್ನೂ ಓದಿ:Arodhya Rama Mandir: ಅಯೋಧ್ಯೆ ರಾಮಮಂದಿರ ಈಗ ಉತ್ತರ ಪ್ರದೇಶದ ನಂ 1 ಪ್ರವಾಸಿ ತಾಣ!

Leave a Reply

Your email address will not be published. Required fields are marked *