Tuesday, 7th January 2025

Scholarships for Students: ವಿದ್ಯಾರ್ಥಿಗಳೇ ಗಮನಿಸಿ; ನೀವು ಅಪ್ಲೈ ಮಾಡಬಹುದಾದ ಸ್ಕಾಲರ್‌ಶಿಪ್‌ಗಳ ಪಟ್ಟಿ ಇಲ್ಲಿದೆ

Scholarships for Students

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಶಿಕ್ಷಣಕ್ಕೆ ಬಹಳಷ್ಟು ಪ್ರಾಮುಖ್ಯತೆ ಸಿಗುತ್ತಿದೆ. ಸರ್ಕಾರ ಬಜೆಟ್‌ನಲ್ಲಿ ಇದಕ್ಕಾಗಿ ಸಾಕಷ್ಟು ಅನುದಾನ ಒದಗಿಸುತ್ತಿದೆ. ಜತೆಗೆ ಬಡ ವಿದ್ಯಾರ್ಥಿಗಳಿಗೆ, ಉನ್ನತ ಶಿಕ್ಷಣಕ್ಕೆ ಸ್ಕಾಲರ್‌ಶಿಪ್‌ ಒದಗಿಸುತ್ತಿದೆ. ಮಾತ್ರವಲ್ಲ ಖಾಸಗಿ ಸಂಸ್ಥೆ, ಕಂಪೆನಿಗಳೂ ವಿದ್ಯಾರ್ಥಿ ವೇತನ ನೀಡುವ ಮೂಲಕ ಉತ್ತೇಜನ ನೀಡುತ್ತಿದೆ. ದೇಶದಲ್ಲಿ ಲಭ್ಯವಿರುವ ಮುಖ್ಯ ಸ್ಕಾಲರ್‌ಶಿಪ್‌ಗಳ ವಿವರ ಇಲ್ಲಿದೆ (Scholarships for Students).

INSPIRE ಸ್ಕಾಲರ್‌ಶಿಪ್‌

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮೂಲ ಮತ್ತು ನೈಸರ್ಗಿಕ ವಿಜ್ಞಾನಗಳಲ್ಲಿ ಉನ್ನತ ಶಿಕ್ಷಣ ಪೂರೈಸುವ ವಿದ್ಯಾರ್ಥಿಗಳಿಗಾಗಿ ಪರಿಚಯಿಸಿದ ಸ್ಕಾಲರ್‌ಶಿಪ್‌ ಅನ್ನು ಇನ್ನೋವೇಶನ್‌ ಇನ್‌ ಸೈನ್ಸ್‌ ಪರ್‌ಸ್ಯೂಟ್‌ ಫಾರ್‌ ಇನ್‌ಸ್ಪೈರ್ ರೀಸರ್ಚ್‌ (Innovation in Science Pursuit for Inspired Research-INSPIRE) ಎಂದು ಕರೆಯಲಾಗುತ್ತದೆ. ಬೋರ್ಡ್ ಪರೀಕ್ಷೆಗಳಲ್ಲಿ 12ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ಮತ್ತು ಯಾವುದೇ ಬಿ.ಎಸ್‌ಸಿ ಅಥವಾ ಇಂಟಿಗ್ರೇಟೆಡ್ ಎಂ.ಎಸ್‌ಸಿ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಹರು. ಅಂದರೆ ಜೆಇಇ (Mains & Advanced) ಮತ್ತು ನೀಟ್‌ನಲ್ಲಿ ಅಗ್ರ 10,000 ರ‍್ಯಾಂಕ್‌ ಬರುವ ವಿದ್ಯಾರ್ಥಿಗಳು ಮೂಲ ಮತ್ತು ನೈಸರ್ಗಿಕ ವಿಜ್ಞಾನ ವಿಷಯದಲ್ಲಿ ಓದು ಮುಂದುವರಿಸುತ್ತಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಕೆವಿಪಿವೈ ಪರೀಕ್ಷೆಗೆ ಅರ್ಹರಾದ ವಿದ್ಯಾರ್ಥಿಗಳೂ ಇನ್‌ಸ್ಪೈರ್ ವಿದ್ಯಾರ್ಥಿ ವೇತನಕ್ಕೆ ಅರ್ಹರು.ಈ ಯೋಜನೆ ಮೂಲಕ ಪ್ರತಿ ವರ್ಷ 12,000 ವಿದ್ಯಾರ್ಥಿಗಳಿಗೆ 80,000 ರೂ. ನೀಡಲಾಗುತ್ತದೆ.
ಯಾವಾಗ ಅಪ್ಲೈ ಮಾಡಬೇಕು?: ನವೆಂಬರ್‌ನಲ್ಲಿ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ (https://www.online-inspire.gov.in/Account/INSPIREProgramme)

HDFC ಸ್ಕಾಲರ್‌ಶಿಪ್‌

ಎಚ್‌ಡಿಎಫ್‌ಸಿ ಬ್ಯಾಂಕ್‌ ಪ್ರತಿ ವರ್ಷ ಒದಗಿಸುವ ಸ್ಕಾಲರ್‌ಶಿಪ್‌ Educational Crisis Scholarship Support-ECSS ಹೆಸರಿನಲ್ಲಿ ಗುರುತಿಸಿಕೊಂಡಿದೆ. ಇದು ಶಾಲಾ ವಿದ್ಯಾರ್ಥಿಗಳು, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವವರಿಗೆ ಲಭ್ಯ. ವಾರ್ಷಿಕ 2.5 ಲಕ್ಷ ರೂ. ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಶಾಲಾ ವಿದ್ಯಾರ್ಥಿಗಳಿಗೆ 15,000 ರೂ. – 18,000 ರೂ., ಸಾಮಾನ್ಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ 30,000 ರೂ. ಮತ್ತು ವೃತ್ತಿಪರ ಪದವಿ ಪೂರ್ವ ವಿದ್ಯಾರ್ಥಿಗಳಿಗೆ 50,000 ರೂ. ವಾರ್ಷಿಕ ಧನ ಸಹಾಯ ಲಭ್ಯ. ಅಲ್ಲದೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 75,000 ರೂ. ಒದಗಿಸಲಾಗುತ್ತದೆ. ಪ್ರತಿ ವರ್ಷ 1,000 ಫಲಾನುಭವಿಗಳಿಗೆ ಇದನ್ನು ನೀಡಲಾಗುತ್ತದೆ. ಯಾವುದೇ ಕೋರ್ಸ್‌ ಓದುವವರು ಅರ್ಜಿ ಸಲ್ಲಿಸಬಹುದು.
ಯಾವಾಗ ಅಪ್ಲೈ ಮಾಡಬೇಕು?: ಜನವರಿಯಲ್ಲಿ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ (https://www.hdfcbank.com/htdocs/common/ECSS_scholarship.htm)

FAEA ಸ್ಕಾಲರ್‌ಶಿಪ್‌

ಫೌಂಡೇಷನ್‌ ಫಾರ್‌ ಅಕಾಡೆಮಿಕ್‌ ಎಕ್ಸಲೆನ್ಸ್‌ & ಆಕ್ಸೆಸ್‌ (Foundation for Academic Excellence and Access-FAEA) ಸ್ಕಾಲರ್‌ ಶಿಪ್‌ ಅನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಅಧ್ಯಯನಕ್ಕಾಗಿ ನೀಡಲಾಗುತ್ತದೆ. ಪ್ರತಿ ವರ್ಷ 50 ವಿದ್ಯಾರ್ಥಿಗಳಿಗೆ ಈ ನೆರವು ಸಿಗುತ್ತದೆ.
ಯಾವಾಗ ಅಪ್ಲೈ ಮಾಡಬೇಕು?: ಮೇ/ಜೂನ್‌ನಲ್ಲಿ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ (http://www.faeaindia.org/)

Indian Oil Academic ಸ್ಕಾಲರ್‌ಶಿಪ್‌

ಇಂಡಿಯನ್‌ ಆಯಿಲ್‌ನ ಈ ಸ್ಕಾಲರ್‌ಶಿಪ್‌ ಎಂಜಿನಿಯರಿಂಗ್‌, ವೈದ್ಯಕೀಯ ಮತ್ತು ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಲಭ್ಯ. 12ನೇ ತರಗತಿ ತೇರ್ಗಡೆಯಾಗಿ ಸದ್ಯ ಬಿ.ಟೆಕ್‌, ಎಂ.ಬಿ.ಬಿ.ಎಸ್‌. ಅಥವಾ ಎಂಬಿಎಯ ಮೊದಲ ವರ್ಷದಲ್ಲಿರುವ ವಿದ್ಯಾರ್ಥಿಗಳು ಅಪ್ಲೈ ಮಾಡಬಹುದು. ಪ್ರತಿ ವರ್ಷ 2,600 ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್‌ ಲಭ್ಯ.
ಯಾವಾಗ ಅಪ್ಲೈ ಮಾಡಬೇಕು?: ಜುಲೈ-ಅಕ್ಟೋಬರ್‌ನಲ್ಲಿ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ (https://www.iocl.com/Aboutus/AcademicScholarships.aspx)

Aditya Birla ಸ್ಕಾಲರ್‌ಸಿಪ್‌

ಎಂಜಿನಿಯರಿಂಗ್, ಕಾನೂನು ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಮುಖ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್‌ ಲಭ್ಯ. ಪ್ರತಿ ವರ್ಷ 20 ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ.
ಯಾವಾಗ ಅಪ್ಲೈ ಮಾಡಬೇಕು?: ಜುಲೈಯಲ್ಲಿ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ (https://www.adityabirlascholars.net/index.aspx)

AICTE Pragati ಸ್ಕಾಲರ್‌ಸಿಪ್‌

ತಂತ್ರಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆಯುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಾರ್ಷಿಕ 8 ಲಕ್ಷ ರೂ. ಆದಾಯ ಹೊಂದಿರುವ ಕುಟುಂಬದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಜತೆಗೆ ಎಐಸಿಟಿಇ ಅನುಮೋದಿತ ಸಂಸ್ಥೆಯಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ಪದವಿ ಕೋರ್ಸ್‌ನ ಮೊದಲ ವರ್ಷ ಅಥವಾ ಎರಡನೇ ವರ್ಷದಲ್ಲಿ ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ಗೆ ದಾಖಲಾಗಿರಬೇಕು. ಈ ಯೋಜನೆ ಮೂಲಕ ಪ್ರತಿ ವರ್ಷ 5,000 ವಿದ್ಯಾರ್ಥಿನಿಯರಿಗೆ 50,000 ರೂ. ನೀಡಲಾಗುತ್ತದೆ.
ಯಾವಾಗ ಅಪ್ಲೈ ಮಾಡಬೇಕು?: ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ (https://www.aicte-india.org/pragathiSaksham.php)

ಈ ಸುದ್ದಿಯನ್ನೂ ಓದಿ: HDFC Bank Scholarship: ಹೆಚ್​ಡಿಎಫ್​ಸಿ ಬ್ಯಾಂಕ್​ ಪರಿವರ್ತನ್‌ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ; ಇಲ್ಲಿದೆ ಡಿಟೇಲ್ಸ್‌

Leave a Reply

Your email address will not be published. Required fields are marked *