Friday, 13th December 2024

ಡಿ.18 ರಿಂದ 10, 12 ತರಗತಿ ವಿದ್ಯಾರ್ಥಿಗಳಿಗೆ ನಿಯಮಿತ ತರಗತಿ: ಮ.ಪ್ರದೇಶ ಸರ್ಕಾರ

ಭೋಪಾಲ್: 10 ಹಾಗೂ 12 ತರಗತಿಯ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆ ಬರೆಯುವ ಹಿನ್ನೆಲೆಯಲ್ಲಿ ಡಿ.18 ರಿಂದ ಈ ಪೂರ್ಣ ಪ್ರಮಾಣದ ನಿಯಮಿತ ತರಗತಿಗಳನ್ನು ನಡೆಸಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ.

ಶಾಲಾ ಪ್ರಾಂಶುಪಾಲರೊಂದಿಗೆ ಚರ್ಚಿಸಿದ ನಂತರ, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಬೋಧನಾ ಸಿಬ್ಬಂದಿಯ ಲಭ್ಯತೆಯ ಆಧಾರದ ಮೇಲೆ 9ನೇ ತರಗತಿ ಮತ್ತು 11 ತರಗತಿಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಹೇಳಿದ್ದಾರೆ.