Thursday, 19th September 2024

ಪಂಜಾಬ್’ನಲ್ಲಿ ಹಸಿರು ಫಂಗಸ್ ಪ್ರಕರಣ ಪತ್ತೆ

ನವದೆಹಲಿ: ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡ ಪಂಜಾಬ್ ನ ಜಲಂಧರ್ ನ ವ್ಯಕ್ತಿಯೊಬ್ಬರಲ್ಲಿ ಹಸಿರು ಫಂಗಸ್ ಪತ್ತೆಯಾಗಿದೆ. ಮಧ್ಯಪ್ರದೇಶದಲ್ಲಿ ಹಸಿರು ಫಂಗಸ್ ಸೋಂಕು ಮೊದಲ ಪ್ರಕರಣ ವರದಿಯಾಗಿತ್ತು.

ರೋಗಿಯೊಬ್ಬರು ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದರು. ಹಸಿರು ಫಂಗಸ್ ಪತ್ತೆಯಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ಸಿವಿಲ್ ಆಸ್ಪತ್ರೆ ತಿಳಿಸಿದೆ.

ಪಂಜಾಬ್ ರಾಜ್ಯದಲ್ಲಿ ಪತ್ತೆಯಾದ ಮೊದಲ ಗ್ರೀನ್ ಫಂಗಸ್ ಪ್ರಕರಣ ಇದಾ ಗಿದೆ. ಸೋಂಕಿಗೆ ಒಳಗಾಗಿರುವ ವ್ಯಕ್ತಿ ಕಪ್ಪು ಶಿಲೀಂಧ್ರದಂತೆಯೇ ರೋಗಲಕ್ಷಣ ಗಳನ್ನು ಹೊಂದಿರುತ್ತಾನೆ. ನಾವು ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಜೂ.14ರಂದು ರೋಗಿಯೊಬ್ಬನಲ್ಲಿ ಹಸಿರು ಫಂಗಸ್ ಪತ್ತೆಯಾಗಿತ್ತು. ಚಿಕಿತ್ಸೆಗಾಗಿ ಇಂದೋರ್ ಖಾಸಗಿ ಆಸ್ಪತ್ರೆಯಿಂದ ಏರ್ ಲಿಫ್ಟ್ ಮೂಲಕ ಮುಂಬಯಿಯ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿ ತಿಳಿಸಿದೆ

Leave a Reply

Your email address will not be published. Required fields are marked *