Saturday, 4th January 2025

Self Harming: ದೆಹಲಿ ಕೆಫೆ ಮಾಲೀಕನ ಆತ್ಮಹತ್ಯೆ ಕೇಸ್‌ನಲ್ಲಿ ಬಿಗ್‌ ಅಪ್ಡೇಟ್‌! ವೈರಲಾದ ವಿಡಿಯೊದಲ್ಲಿ 2 ಕೋಟಿ ರೂ. ವಿಚಾರ ಬಯಲು

Self Harming

ನವದೆಹಲಿ: ಮಂಗಳವಾರ ಸಂಜೆ ದೆಹಲಿಯ (Delhi) ಪ್ರಸಿದ್ಧ ಕೆಫೆ ಮಾಲೀಕ ಪುನೀತ್ ಖುರಾನಾ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದರು. ಪುನೀತ್‌ ಪತ್ನಿ ಕಿರುಕುಳದಿಂದಾಗಿ (harassment) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಸಾಕ್ಷಿ ಎನ್ನುವಂತೆ ಇದೀಗ ವಿಡಿಯೋ ಒಂದು ವೈರಲ್‌ ಆಗಿದ್ದು, ಮನೆ ಬದಲಿಗೆ 2 ಕೋಟಿ ರೂ. ವರ್ಗಾವಣೆಗೆ ಸಂಬಂಧಿಸಿದಂತೆ ಪುನೀತ್ ಖುರಾನಾ ತನ್ನ ಮಾವನೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. (Self Harming)

ಫಾರ್ ಗಾಡ್ಸ್ ಕೇಕ್’ ಹೆಸರಿನ ಕೆಫೆ ಸಹ-ಮಾಲೀಕ ಖುರಾನಾ ಅವರು ಮಂಗಳವಾರ ದೆಹಲಿಯ ಮಾಡೆಲ್ ಟೌನ್‌ನಲ್ಲಿರುವ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿಗೆ ಪತ್ನಿ ಹಾಗೂ ಪತ್ನಿಯ ಕುಟುಂಬಸ್ಥರು ಕಾರಣವೆಂದು ಖುರಾನಾ ಕುಟುಂಬಸ್ಥರು ಆರೋಪಿಸಿದ್ದಾರೆ.

ವಿಡಿಯೋದಲ್ಲಿ ಪುನೀತ್‌ ಖುರಾನಾ ಅವರ ಮಾವ ಜಗದೀಶ್‌ ಪಹ್ವಾ ಅವರು ಮನೆ ಬದಲಿಗೆ 2 ಕೋಟಿ ರೂ. ನೀಡುವಂತೆ ಹೇಳಿದ್ದರು. ಆದರೆ ಖುರಾನಾ ಅದನ್ನು ನಿರಾಕರಿಸಿದ್ದರು. ಖುರಾನಾ ಕುಟುಂಬಸ್ಥರು ಪೊಲೀಸರಿಗೆ ಹಲವು ದಾಖಲೆಗಳನ್ನು ನೀಡಿದ್ದು, ಇಂತಹ ಘಟನೆಗಳಿಂದ ಖುರಾನಾ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ. ಶೀಘ್ರವೇ ಪತ್ನಿ ಹಾಗೂ ಆಕೆಯ ಮನೆಯವರನ್ನು ಬಂಧಿಸುವಂತೆ ಕೋರಿದ್ದಾರೆ.

2016ರಲ್ಲಿ ಇಬ್ಬರು ವಿವಾಹವಾಗಿದ್ದರು. ವಿಚ್ಚೇದನ ಕುರಿತು ಅವರು ಆಡಿರುವ ಮಾತು ಸದ್ಯ ವೈರಲ್‌ ಆಗಿದ್ದು, ಆಡಿಯೊದಲ್ಲಿ, ಖುರಾನಾ ಮತ್ತು ಅವರ ಪತ್ನಿ ವ್ಯಾಪಾರದ ಆಸ್ತಿಗಾಗಿ ಜಗಳವಾಡುವುದನ್ನು ಕೇಳಬಹುದು. ಅದರಲ್ಲಿ ಖುರಾನಾ ಪತ್ನಿ, ನಮ್ಮ ವಿಚ್ಛೇದನವಾಗುತ್ತಿದೆ ಅಷ್ಟೇ ಆದರೆ ನಾನಿನ್ನೂ ನಾನು ಕೂಡ ವ್ಯಾಪಾರ ಪಾಲುದಾರನಾಗಿದ್ದೇನೆ ಬಾಕಿ ಮೊತ್ತವನ್ನ ನೀವು ಪಾವತಿಸಬೇಕು ಎಂದು ಆಕೆ ಹೇಳಿದ್ದಾಳೆ. ಪೊಲೀಸರು ಖುರಾನಾ ಅವರ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ವಿಚಾರಣೆಗಾಗಿ ಅವರ ಪತ್ನಿಯನ್ನು ಕರೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಪುನೀತ್​ ಸ್ನೇಹಿತರೊಬ್ಬರು, ಸೋಮವಾರ ಸಂಜೆ ಆತ ನಮಗೆ ಕರೆ ಮಾಡಿದ್ದ, ಆಗ ತೀವ್ರ ಒತ್ತಡದಲ್ಲಿದ್ದು, ಮಾತನಾಡಬೇಕು ಎಂದಿದ್ದ. ಈ ವೇಳೆ, ಮನಿಕಾ ಕಟುಂಬಸ್ಥರು ತನ್ನ ತಂದೆ ಮತ್ತು ಸಂಬಂಧಿಕರಿಗೆ ಹಾನಿ ಮಾಡುವ ಸಾಧ್ಯತೆ ಕುರಿತು ಕಳವಳ ವ್ಯಕ್ತಪಡಿಸಿದ್ಧ. ಮಧ್ಯರಾತ್ರಿ 2ರವರೆಗೆ ನಮ್ಮ ಜೊತೆಗೆ ಇದ್ದ ಪುನೀತ್​ ಗೆ ಕಾನೂನು ನಮ್ಮ ಜೊತೆಯಲ್ಲಿದ್ದು, ನ್ಯಾಯ ಸಿಗಲಿದೆ ಎಂದು ಸಮಾಧಾನ ಮಾಡುವ ಪ್ರಯತ್ನ ಮಾಡಿದೆವು ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ : Self harming : ಅತುಲ್‌ ಪ್ರಕರಣ ಬೆನ್ನಲ್ಲೇ ಮತ್ತೊಂದು ಕೇಸ್‌- ಪತ್ನಿಯ ಕಿರುಕುಳಕ್ಕೆ ಬೇಸತ್ತು ಕುಟುಂಬ ಸಮೇತ ನವವಿವಾಹಿತ ಆತ್ಮಹತ್ಯೆ