Saturday, 4th January 2025

Self Harming: ಪತ್ನಿಯ ಕಿರುಕುಳಕ್ಕೆ ಮತ್ತೊಂದು ಬಲಿ? ದೆಹಲಿಯ ಉದ್ಯಮಿ ಆತ್ಮಹತ್ಯೆ

Self Harming

ನವದೆಹಲಿ: ಸದ್ಯ ಬೆಂಗಳೂರು ಟೆಕ್ಕಿ ಆತ್ಯಹತ್ಯೆ ಮಾಸುವ ಮುನ್ನವೇ ಮತ್ತೊಂದು ಅದಕ್ಕೆ ಹೋಲುವಂತಹ ಘಟನೆ ನಡೆದಿದೆ. ಮಂಗಳವಾರ ಸಂಜೆ ದೆಹಲಿಯ (Delhi) ಪ್ರಸಿದ್ಧ ಕೆಫೆಯೊಂದರ ಸಹ-ಸಂಸ್ಥಾಪಕ ಪುನೀತ್ ಖುರಾನಾ ಅವರ ಶವ ಮಾಡೆಲ್ ಟೌನ್‌ನ ಕಲ್ಯಾಣ್ ವಿಹಾರ್ ಪ್ರದೇಶದಲ್ಲಿನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಇದನ್ನು ಆತ್ಮಹತ್ಯೆಯ(Self Harming) ಶಂಕೆ ವ್ಯಕ್ತಪಡಿಸಿದ್ದಾರೆ. 

ಖುರಾನಾ ಮತ್ತು ಅವರ ಪತ್ನಿ ಮಾಣಿಕಾ ಜಗದೀಶ್ ಪಹ್ವಾ ಶೀಘ್ರದಲ್ಲಿಯೇ ವಿಚ್ಛೇದನ ಪಡೆದುಕೊಳ್ಳುವವರಿದ್ದರು ಎಂದು ತಿಳಿದು ಬಂದಿದೆ. ದೆಹಲಿಯಲ್ಲಿ ವುಡ್‌ಬಾಕ್ಸ್ ಕೆಫೆಯನ್ನು ಹೊಂದಿದ್ದ ಇವರಿಬ್ಬರು ವ್ಯವಹಾರದ ಕುರಿತು ಅಸಮಾಧಾನ ಹೊಂದಿದ್ದರು ಎಂದು ತಿಳಿದು ಬಂದಿದೆ.

2016ರಲ್ಲಿ ಇಬ್ಬರು ವಿವಾಹವಾಗಿದ್ದರು. ವಿಚ್ಚೇದನ ಕುರಿತು ಅವರು ಆಡಿರುವ ಮಾತು ಸದ್ಯ ವೈರಲ್‌ ಆಗಿದ್ದು, ಆಡಿಯೊದಲ್ಲಿ, ಖುರಾನಾ ಮತ್ತು ಅವರ ಪತ್ನಿ ವ್ಯಾಪಾರದ ಆಸ್ತಿಗಾಗಿ ಜಗಳವಾಡುವುದನ್ನು ಕೇಳಬಹುದು. ಅದರಲ್ಲಿ ಖುರಾನಾ ಪತ್ನಿ, ನಮ್ಮ ವಿಚ್ಛೇದನವಾಗುತ್ತಿದೆ ಅಷ್ಟೇ ಆದರೆ ನಾನಿನ್ನೂ ನಾನು ಕೂಡ ವ್ಯಾಪಾರ ಪಾಲುದಾರನಾಗಿದ್ದೇನೆ ಬಾಕಿ ಮೊತ್ತವನ್ನ ನೀವು ಪಾವತಿಸಬೇಕು ಎಂದು ಆಕೆ ಹೇಳಿದ್ದಾಳೆ. ಪೊಲೀಸರು ಖುರಾನಾ ಅವರ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ವಿಚಾರಣೆಗಾಗಿ ಅವರ ಪತ್ನಿಯನ್ನು ಕರೆದಿದ್ದಾರೆ.

ಖಾಸಗಿ ಸಂಸ್ಥೆಯೊಂದರ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿದ್ದ 34 ವರ್ಷದ ಅತುಲ್ ಸುಭಾಷ್ (Atul Subhash) ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಡಿ 9 ರಂದು ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ಸಾಯುವ ಮುನ್ನ ಸುದೀರ್ಘ 24 ಪುಟಗಳ ಪತ್ರವನ್ನು ಬರೆದಿಟ್ಟಿದ್ದು, ಪತ್ನಿಯಿಂದಾಗುತ್ತಿರುವ ಕಿರುಕುಳವನ್ನು ಬಿಚ್ಚಿಟ್ಟಿದ್ದರು.

ಅತುಲ್‌ ಸಾವಿನ ಬಳಿಕ ಆತನ ಸಹೋದರ ವಿಕಾಸ್‌ ನಿಖಿತಾ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದು, ಪತಿ ಆತ್ಮಹತ್ಯೆ ಬಳಿಕ ನಿಖಿತಾ ಪರಾರಿಯಾಗಿದ್ದಳು. ಹುಡುಕಾಟ ಆರಂಭಿಸಿದ್ದ ಮಾರತ್ತಹಳ್ಳಿ ಪೊಲೀಸರು ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದರು.

ತಲೆ ಮರೆಸಿಕೊಂಡಿದ್ದ ಪತ್ನಿ ನಿಖಿತಾ ಸಿಂಘಾನಿಯಾ(Nikita Singhania) ಆಕೆಯ ತಾಯಿ ನಿಶಾ ಮತ್ತು ಸಹೋದರ ಅನುರಾಗ್‌ನನ್ನು ಪೊಲೀಸರು ಬಂಧಿಸಿದ್ದರು. ನಂತರ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ನಿಖಿತಾ ಸಿಂಘಾನಿಯಾ ಚಿಕ್ಕಪ್ಪನಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಈ ಸುದ್ದಿಯನ್ನೂ ಓದಿ : Self harming : ಅತುಲ್‌ ಪ್ರಕರಣ ಬೆನ್ನಲ್ಲೇ ಮತ್ತೊಂದು ಕೇಸ್‌- ಪತ್ನಿಯ ಕಿರುಕುಳಕ್ಕೆ ಬೇಸತ್ತು ಕುಟುಂಬ ಸಮೇತ ನವವಿವಾಹಿತ ಆತ್ಮಹತ್ಯೆ