ಲಖನೌ: ಪತ್ನಿ ಹಾಗೂ ಆಕೆಯ ಮನಗೆಯವರ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳೂ ದೇಶದಲ್ಲಿ ಆಗಾಗ ಮರುಕಳಿಸುತ್ತಿವೆ. ಕಳೆದವಾರ ಉತ್ತರಪ್ರದೇಶದ(Uttar Pradesh) ಹಮೀರ್‌ಪುರದಲ್ಲಿ(Hamirpur) 35 ವರ್ಷದ ವ್ಯಕ್ತಿಯೊಬ್ಬರ ಪತ್ನಿ ಮತ್ತು ಅತ್ತೆಯ ಕಿರುಕುಳದಿಂದಾಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ(Self Harming)
#Hamirpur: A man allegedly ended his life by consuming poison, citing harassment by his wife & mother-in-law. A video recorded before his death has now surfaced.
— MenToo (@MenTooSave) January 6, 2025
When will men's #MentalHealth & struggles be taken seriously? 💔#JusticeForMen
pic.twitter.com/inPaQkKyyd
ಆತ್ಮಹತ್ಯೆಗೂ ಮುನ್ನ 41 ಸೆಕೆಂಡುಗಳ ವಿಡಿಯೊ ರೆಕಾರ್ಡ್ ಮಾಡಿರುವ ರಾಜೇಶ್ ಕುಮಾರ್(Rajesh Kumar) ತನ್ನ ಪತ್ನಿ ಮತ್ತು ಅತ್ತೆಯನ್ನು ಬಂಧಿಸಬೇಕೆಂದು ಒತ್ತಾಯಿಸಿ ನ್ಯಾಯ ಕೇಳಿದ್ದಾರೆ. ಪತ್ನಿಯ ವಶದಲ್ಲಿರುವ ತನ್ನ ಇಬ್ಬರು ಮಕ್ಕಳನ್ನು ಮರಳಿ ತನ್ನ ಮನೆಗೆ ಕಳುಹಿಸಬೇಕು ಎಂದು ವಿಡಿಯೊದಲ್ಲಿ ಹೇಳಿದ್ದಾರೆ.”ನಾನು ಪ್ರಾಮಾಣಿಕನಾಗಿದ್ದರೆ ನನ್ನ ಪ್ರಕರಣದಲ್ಲಿ ನನಗೆ ನ್ಯಾಯ ಸಿಗಬೇಕು, ನನ್ನ ಮಕ್ಕಳನ್ನು ಮರಳಿ ಮನೆಗೆ ಕರೆತರಬೇಕು. ನನ್ನ ಹೆಂಡತಿ ಮತ್ತು ಅತ್ತೆಯನ್ನು ಜೈಲಿಗೆ ಕಳುಹಿಸಬೇಕು” ಎಂದು ರಾಜೇಶ್ ಹೇಳಿರುವ ವಿಡಿಯೊವೊಂದು ಈಗ ಭಾರೀ ವೈರಲ್ ಆಗಿದೆ(Viral Video)
ರಾಜೇಶ್ ತನ್ನ ಆತ್ಮಹತ್ಯೆಯ ಹಿಂದಿನ ಕಾರಣವನ್ನು ವಿವರವಾಗಿ ಹೇಳಿಲ್ಲ. ಆದರೆ ಅವರ ಸಹೋದರ ಸಂತೋಷ್ ಕುಮಾರ್ ಪೊಲೀಸರಿಗೆ “ತನ್ನ ಹೆಂಡತಿ ಮತ್ತು ಅತ್ತೆಯಿಂದ ಪದೇ ಪದೇ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದನು. ಸುಳ್ಳು ವರದಕ್ಷಿಣೆ ಪ್ರಕರಣದ ಬೆದರಿಕೆ ಹಾಕಿಯೂ ಅವನನ್ನು ಹಿಂಸಿಸುತ್ತಿದ್ದರು” ಎಂದು ಹೇಳಿದ್ದಾರೆ. ಸುಮೇರ್‌ಪುರ ಬ್ಲಾಕ್‌ನ ತೆಹ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿಯಿದೆ.
“ರಾಜೇಶ್ ಕುಮಾರ್ ಜನವರಿ 3 ರಂದು ವಿಷಕಾರಿ ಪದಾರ್ಥವನ್ನು ಸೇವಿಸಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಅವರು ಮೃತಪಟ್ಟಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆತ್ಮಗತ್ಯೆಗೂ ಮುನ್ನ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ತನಿಖೆ ನಡೆಸಲಾಗುತ್ತಿದೆ” ಎಂದು ಹಮೀರ್‌ಪುರ ವೃತ್ತದ ಅಧಿಕಾರಿ ರಾಜೇಶ್ ಕಮಲ್ ತಿಳಿಸಿದ್ದಾರೆ. ಸಂತೋಷ್ ಅವರ ದೂರಿನ ಆಧಾರದ ಮೇಲೆ ರಾಜೇಶ್ ಅವರ ಪತ್ನಿ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಕಮಲ್ ಹೇಳಿದ್ದಾರೆ.
ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ
ನಿನ್ನೆಯಷ್ಟೇ ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿತ್ತು.
ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪತಿ ಅನೂಪ್ ಕುಮಾರ್, ಪತ್ನಿ ರಾಖಿ, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದರು. 5 ವರ್ಷದ ಹೆಣ್ಣು ಮಗು, 2 ವರ್ಷದ ಗಂಡು ಮಗುವಿಗೆ ವಿಷವುಣಿಸಿ ನಂತರ ಇಬ್ಬರು ದಂಪತಿಗಳು ನೇಣಿಗೆ ಶರಣಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು. ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ:Self Harming: ರಿಯಲ್ ಎಸ್ಟೇಟ್ ಉದ್ಯಮಿಯ ವಂಚನೆಯಿಂದ ನೊಂದು ಶಿಕ್ಷಕ ಆತ್ಮಹತ್ಯೆ