Thursday, 12th December 2024

ಸೆನ್ಸೆಕ್ಸ್’ನಲ್ಲಿ 125 ಪಾಯಿಂಟ್ಸ್ ಏರಿಕೆ

ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಸೆನ್ಸೆಕ್ಸ್ 125 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 36 ಪಾಯಿಂಟ್ಸ್ ಹೆಚ್ಚಳವಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 125.38 ಪಾಯಿಂಟ್ಸ್ ಏರಿಕೆಗೊಂಡು 52778.45 ಪಾಯಿಂಟ್ಸ್‌, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 36.2 ಪಾಯಿಂಟ್ಸ್ ಹೆಚ್ಚಾಗಿ 15814.62 ಪಾಯಿಂಟ್ಸ್ ತಲುಪಿದೆ.

ಆರಂಭಿಕ ವಹಿವಾಟಿನಲ್ಲಿ 1368 ಷೇರುಗಳು ಏರಿಕೆಗೊಂಡರೆ, 652 ಷೇರುಗಳು ಕುಸಿದವು. ಮಹೀಂದ್ರಾ ಷೇರು ಸುಮಾರು 53 ರೂ. ಹೆಚ್ಚಾಗಿ 1181.10 ರೂಪಾಯಿಗೆ ಆರಂಭಗೊಂಡಿದೆ. ಪವರ್ ಗ್ರಿಡ್ ಕಾರ್ಪೊ ರೇಶನ್ ಷೇರುಗಳು ರೂ. 3 ರಷ್ಟು ಏರಿಕೆಯಾಗಿ ರೂ .169.90 ಕ್ಕೆ ಆರಂಭವಾಯಿತು. ಹೆಚ್ ಡಿ ಎಫ್ ಸಿ ಷೇರುಗಳು 25 ರೂಪಾಯಿಗಳ ಏರಿಕೆಯೊಂದಿಗೆ 2,439.35 ರೂ, ಎಚ್‌ಸಿಎಲ್ ಟೆಕ್‌ನ ಷೇರುಗಳು 10 ರೂ ಗಳಿಕೆಯೊಂದಿಗೆ 1,017.30 ಕ್ಕೆ ಪ್ರಾರಂಭ ವಾಯಿತು.

ಎಸ್‌ಬಿಐ ಲೈಫ್‌ನ ಷೇರುಗಳು ಸುಮಾರು 16 ರೂ.ಗಳಷ್ಟು ಇಳಿಕೆಯಾಗಿ 1,112.75 ರೂ., ಟಾಟಾ ಸ್ಟೀಲ್ ನ ಷೇರುಗಳು 15 ರೂಪಾಯಿಗಳಷ್ಟು ಕಡಿಮೆಯಾಗಿ 1443.85 ರೂಪಾಯಿಗೆ ಪ್ರಾರಂಭವಾಗಿದೆ.

ಆಕ್ಸಿಸ್ ಬ್ಯಾಂಕಿನ ಷೇರುಗಳು ಸುಮಾರು 3 ರೂ.ಗಳಷ್ಟು ಇಳಿಕೆಯಾಗಿ 714.40 ರೂ., ಹಿಂಡಾಲ್ಕೊ ಷೇರು ಸುಮಾರು 4 ರೂ. ಕುಸಿದು 454.40ಕ್ಕೆ ಆರಂಭ ಗೊಂಡಿತು.