Thursday, 12th December 2024

ಸೆನ್ಸೆಕ್ಸ್ 445 ಪಾಯಿಂಟ್ಸ್ ಏರಿಕೆ

ಮುಂಬೈ: ಭಾರತದ ಷೇರುಪೇಟೆ ಸೋಮವಾರ ಭರ್ಜರಿ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 445 ಪಾಯಿಂಟ್ಸ್ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 120 ಪಾಯಿಂಟ್ಸ್ ಏರಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 445 ಪಾಯಿಂಟ್ಸ್ ಏರಿಕೆಗೊಂಡು 59211.43, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 119.1  ಹೆಚ್ಚಾಗಿ 17651.15 ಪಾಯಿಂಟ್ಸ್ ತಲುಪಿದೆ. ಆರಂಭದಲ್ಲಿ 1516 ಷೇರುಗಳು ಏರಿಕೆಗೊಂಡರೆ, 339 ಷೇರುಗಳು ಕುಸಿದು, 133 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ದೇವಿ ಲ್ಯಾಬ್‌ನ ಷೇರು 208 ರೂಪಾಯಿಗಳಷ್ಟು ಏರಿಕೆಯೊಂದಿಗೆ 5,040.10 ರೂ. ಆರಂಭವಾಯಿತು. ಎನ್‌ಟಿಪಿಸಿಯ ಷೇರು ರೂ. 142.65 ರಲ್ಲಿ ಆರಂಭವಾಗಿದೆ. ಎಚ್‌ಡಿಎಫ್‌ಸಿ ಷೇರುಗಳು ರೂ .2,749.85 ರಲ್ಲಿ ಆರಂಭವಾಗಿದ್ದು, ರೂ. 38 ರಷ್ಟು ಹೆಚ್ಚಾಗಿದೆ. ಬಜಾಜ್ ಫಿನ್‌ಸರ್ವ್‌ನ ಷೇರುಗಳು ರೂ. 222 ರಷ್ಟು ಏರಿಕೆಯಾಗಿ ರೂ 17,400.00 ಮಟ್ಟದಲ್ಲಿ ಪ್ರಾರಂಭವಾಯಿತು.

ಗ್ರೇಸಿಯಂ ಷೇರುಗಳು ರೂ. 1,646.00 ಕ್ಕೆ ಪ್ರಾರಂಭವಾಯಿತು, ಸುಮಾರು 31 ರೂಪಾಯಿ ಇಳಿಕೆಯಾಗಿದೆ. ಐಷರ್ ಮೋಟಾರ್ಸ್ ನ ಷೇರುಗಳು 737 ರೂಪಾಯಿ ಕಡಿಮೆಯಾಗಿ ರೂ .2,737.85 ಕ್ಕೆ ಆರಂಭವಾಯಿತು. ನೆಸ್ಲೆ ಷೇರುಗಳು ರೂ 115 ರಷ್ಟು ಇಳಿಕೆ ಯಾಗಿ ರೂ 19,434.80 ಕ್ಕೆ ಪ್ರಾರಂಭವಾಯಿತು. ಟೈಟಾನ್ ಕಂಪನಿಯ ಷೇರುಗಳು ರೂ 12 ರಷ್ಟು ಕುಸಿದು ರೂ 2,151.60 ಕ್ಕೆ ಪ್ರಾರಂಭವಾಯಿತು. ಲಾರ್ಸೆನ್‌ನ ಷೇರುಗಳು ರೂ .1,685.80 ಕ್ಕೆ ಪ್ರಾರಂಭವಾಗಿ, ಸುಮಾರು 11 ರೂಪಾಯಿಗಳಷ್ಟು ಕಡಿಮೆ ಯಾಗಿದೆ.