Wednesday, 30th October 2024

ಚೇತರಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ

ಮುಂಬೈ: ಭಾರತೀಯ ಷೇರುಪೇಟೆ ಮಂಗಳವಾರ ಏರಿಳಿತದೊಂದಿಗೆ ಸಮತಟ್ಟಾಗಿ ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 7.09 ಪಾಯಿಂಟ್ ಏರಿಕೆಗೊಂಡು 49,751.41 ಪಾಯಿಂಟ್ಸ್‌ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ನಿಫ್ಟಿ 32.10 ಪಾಯಿಂಟ್ ಏರಿಕೆಗೊಂಡು 14,707.80 ಪಾಯಿಂಟ್ಸ್‌ಗೆ ತಲುಪಿದೆ. 1657 ಷೇರುಗಳು ಏರಿಕೆ ಗೊಂಡರೆ, 1213 ಷೇರುಗಳು ಕುಸಿದವು.

ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಒಎನ್‌ಜಿಸಿ, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಯುಪಿಎಲ್ ಪ್ರಮುಖ ಲಾಭ ಗಳಿಸಿದ ಕಂಪನಿಗಳಾಗಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್, ಮಾರುತಿ ಸುಜುಕಿ, ಬಜಾಜ್ ಆಟೋ, ಅದಾನಿ ಪೋರ್ಟ್ಸ್ ಮತ್ತು ಡಿವಿಸ್ ಲ್ಯಾಬ್ಸ್ ನಷ್ಟ ಅನುಭವಿಸಿದೆ.

ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ 72.46 ರೂಪಾಯಿಗೆ ಕೊನೆ ಗೊಂಡಿತು.