Sunday, 15th December 2024

ಸೆನ್ಸೆಕ್ಸ್ ನಾಗಾಲೋಟ: ಸಾರ್ವಕಾಲಿಕ ದಾಖಲೆ ನಿರೀಕ್ಷೆ

share market

ಮುಂಬೈ: ಜಾಗತಿಕ ಷೇರುಪೇಟೆಯ ಏರಿಳಿಕೆಯ ವಹಿವಾಟಿನ ನಡುವೆ ಬಾಂಬೆ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ನಾಗಾಲೋಟ ಮುಂದುವರಿದಿದೆ.

ಸೋಮವಾರ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 62 ಸಾವಿರಕ್ಕೆ ಸಮೀಪಿಸಿದ್ದು, ಸಾರ್ವಕಾಲಿಕ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ.

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 459.64 ಅಂಕ ಏರಿಕೆಯಾಗಿದ್ದು, 61,765 ಅಂಕಗಳ ಸಾರ್ವಕಾಲಿಕ ದಾಖಲೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಎನ್ಎಸ್ಇ ನಿಫ್ಟಿ 138.50 ಅಂಕಗಳ ಜಿಗಿತದೊಂದಿಗೆ 18,477 ಅಂಕಗಳ ದಾಖಲೆಯ ವಹಿವಾಟಿನ ಗಡಿ ತಲುಪಿದೆ.

ಹಿಂಡಲ್ಕೋ ಇಂಡಸ್ಟ್ರೀಸ್, ಇನ್ಫೋಸಿಸ್, ಟೆಕ್ ಮಹೀಂದ್ರ, ಜೆಎಸ್ ಡಬ್ಲ್ಯು ಸ್ಟೀಲ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭಗಳಿಸಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿಯೂ ಋಣಾತ್ಮಕ ವಹಿವಾಟಿಗೆ ಸಾಕ್ಷಿಯಾಗಿದೆ, ಹಾಂಗ್ ಕಾಂಗ್, ಚೀನಾ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಭಾರೀ ಕುಸಿತ ಕಂಡಿರುವುದಾಗಿ ವರದಿ ತಿಳಿಸಿದೆ.