Wednesday, 11th December 2024

55 ಸಾವಿರ ಗಡಿ ದಾಟಿದ ಷೇರುಪೇಟೆ ಸೆನ್ಸೆಕ್ಸ್

ಮುಂಬೈ/ನವದೆಹಲಿ: ಶುಕ್ರವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ದಾಖಲೆಯ ಮಟ್ಟದಲ್ಲಿ 55 ಸಾವಿರ ಗಡಿದಾಟಿದ್ದು, ದಿನದ ವಹಿವಾಟು ಅಂತ್ಯದಲ್ಲಿ 593 ಪಾಯಿಂಟ್ಸ್ ಏರಿಕೆಯಾದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 164 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 593.31 ಪಾಯಿಂಟ್ಸ್‌ ಹೆಚ್ಚಾಗಿ 55,437.29, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 164.70 ಪಾಯಿಂಟ್ಸ್ ಏರಿಕೆಗೊಂಡು 16,529.10 ಪಾಯಿಂಟ್ಸ್‌ಗೆ ಜಿಗಿದಿದೆ.ವಹಿವಾಟು ಅಂತ್ಯದಲ್ಲಿ 1412 ಷೇರುಗಳು ಏರಿಕೆಗೊಂಡರೆ, 1583 ಷೇರುಗಳು ಕುಸಿದವು.

ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್‌, ಟಿಸಿಎಸ್, ಎಲ್‌&ಟಿ, ಭಾರ್ತಿ ಏರ್‌ಟೆಲ್, ಎಚ್‌ಸಿಎಲ್‌ ಟೆಕ್ನಾಲಜೀಸ್‌ ನಿಫ್ಟಿಯಲ್ಲಿ ಹೆಚ್ಚು ಲಾಭಗಳಿಸಿದ ಷೇರುಗಳಾಗಿವೆ.