Saturday, 14th December 2024

ಷೇರುಪೇಟೆ ಸಾರ್ವಕಾಲಿಕ ದಾಖಲೆ: 59,000 ಗಡಿ ದಾಟಿದ ಸೆನ್ಸೆಕ್ಸ್

ಮುಂಬೈ: ಭಾರತದ ಷೇರುಪೇಟೆ ಗುರುವಾರ ಸಾರ್ವಕಾಲಿಕ ದಾಖಲೆಯನ್ನೇ ಸೃಷ್ಟಿಸಿದ್ದು, ಸೆನ್ಸೆಕ್ಸ್ ಮೊಟ್ಟ ಮೊದಲ ಬಾರಿಗೆ 59,000 ಗಡಿ ದಾಟಿ, ನಿಫ್ಟಿ ಕೂಡ ಹೊಸ ದಾಖಲೆಯನ್ನೇ ಬರೆದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 418 ಪಾಯಿಂಟ್ಸ್ ಹೆಚ್ಚಾಗಿ 59,141.16 ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 110 ಪಾಯಿಂಟ್ಸ್ 17,629.50 ತಲುಪಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಇಂಟ್ರಾಡೇ ಟ್ರೇಡ್‌ನಲ್ಲಿ ಕ್ರಮವಾಗಿ 25,384.22 ಮತ್ತು 28,456.77 ರ ಹೊಸ ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದವು.

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ.0.42ರಷ್ಟು ಅಧಿಕವಾಗಿ 25,321.78 ಕ್ಕೆ ಕೊನೆಗೊಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ.0.04 ಏರಿಕೆಯಾಗಿ 28,294.36 ಕ್ಕೆ ಕೊನೆಗೊಂಡಿತು. ನಿಫ್ಟಿ ಖಾಸಗಿ ಬ್ಯಾಂಕ್ ಸೂಚ್ಯಂಕವು ಶೇಕಡಾ 2.67 ಏರಿಕೆಯನ್ನು ದಾಖಲಿಸಿದೆ. ನಿಫ್ಟಿ ಮೆಟಲ್ ಮತ್ತು ಐಟಿ ಸೂಚ್ಯಂಕಗಳು ತಲಾ 0.62 ಪ್ರತಿಶತ ಕುಸಿದವು.