Thursday, 12th December 2024

ಸಂವೇದಿ ಸೂಚ್ಯಂಕ 225 ಅಂಕಗಳಷ್ಟು ಇಳಿಕೆ

ಮುಂಬೈ: ವಿದೇಶಿ ಬಂಡವಾಳದ ಹೊರಹರಿವು ಮತ್ತು ಏಷ್ಯನ್ ಮಾರುಕಟ್ಟೆಯ ಮಿಶ್ರ ವಹಿವಾಟಿನ ಪರಿಣಾಮ ಸೋಮವಾರ ಮುಂಬೈ ಷೇರುಪೇಟೆ ಯ ಸಂವೇದಿ ಸೂಚ್ಯಂಕ 225 ಅಂಕಗಳಷ್ಟು ಇಳಿಕೆ ಕಂಡಿದೆ.

ಸೆನ್ಸೆಕ್ಸ್ 225.04 ಅಂಕ ಕುಸಿದಿದ್ದು, 58,419.78 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಎನ್ ಎಸ್ ಇ ನಿಫ್ಟಿ 69.55 ಅಂಕ ಇಳಿಕೆಯಾಗಿದ್ದು, 17,446.75 ಅಂಕಗಳಲ್ಲಿ ವಹಿವಾಟು ನಡೆಸಿದೆ. ಬಜಾಜ್ ಫಿನ್ ಸರ್ವ್, ಎಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಮಹೀಂದ್ರ ಆಂಡ್ ಮಹೀಂದ್ರ, ಏಷ್ಯನ್ ಪೇಂಟ್ಸ್, ಭಾರ್ತಿ ಏರ್ ಟೆಲ್, ಡಾ.ರೆಡ್ಡೀಸ್ ಮಾರುತಿ ಮತ್ತು ಎಚ್ ಡಿಎಫ್ ಸಿ ಷೇರುಗಳು ನಷ್ಟ ಕಂಡಿದೆ. ಟಾಟಾ ಸ್ಟೀಲ್, ಪವರ್ ಗ್ರಿಡ್, ಎಸ್ ಬಿಐ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿದೆ.

ಶುಕ್ರವಾರ ಸೆನ್ಸೆಕ್ಸ್ 143.20 ಅಂಕಗಳಷ್ಟು ಇಳಿಕೆಯಾಗಿದ್ದು, 58,644.82 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು.