Sunday, 15th December 2024

ಮುಂಬೈ ಷೇರುಪೇಟೆ: ಸೆನ್ಸೆಕ್ಸ್ 714.53 ಅಂಕ ಕುಸಿತ

ಮುಂಬೈ: ಜಾಗತಿಕ ಷೇರುಮಾರುಕಟ್ಟೆಯಲ್ಲಿ ನೀರಸ ವಹಿವಾಟು ಕಂಡು ಬಂದಿದ್ದು, ಮುಂಬೈ ಷೇರುಪೇಟೆಯ ಸೆನ್ಸೆಕ್ಸ್  714.53 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 714.53 ಅಂಕ ಕುಸಿತಗೊಂಡಿದ್ದು, 57,197.15 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 220.60 ಅಂಕ ಇಳಿಕೆಯಾಗಿದ್ದು, 17,172 ಅಂಕಗಳಲ್ಲಿ ವಹಿವಾಟು ಅಂತ್ಯ ಗೊಂಡಿದೆ. ಮಹೀಂದ್ರ ಆಯಂಡ್ ಮಹೀಂದ್ರ, ಭಾರ್ತಿ ಏರ್ ಟೆಲ್, ಮಾರುತಿ ಷೇರುಗಳು ಲಾಭಗಳಿಸಿದೆ.

ನಿಫ್ಟಿ 50ಯ ಅದಾನಿ ಪೋರ್ಟ್ಸ್, ಮಹೀಂದ್ರ ಆಯಂಡ್ ಮಹೀಂದ್ರ, ಎಚ್ ಸಿಎಲ್ ಟೆಕ್ ಮತ್ತು ಐಟಿಸಿ ಷೇರುಗಳು ಹೆಚ್ಚಿನ ಲಾಭ ಗಳಿಸಿದ್ದು, ಹಿಂಡಲ್ಕೋ, ಎಸ್ ಬಿಐ, ಎಚ್ ಯುಎಲ್ ಷೇರು ಮೌಲ್ಯ ಇಳಿಕೆಯಾಗಿದೆ.