Saturday, 14th December 2024

ಷೇರುಪೇಟೆಯಲ್ಲಿ ಬಂಪರ್‌: 123.07 ಅಂಕಗಳ ಏರಿಕೆ ಕಂಡ ಸಂವೇದಿ ಸೂಚ್ಯಂಕ

share market

ಮುಂಬೈ: ಮುಂಬೈ ಷೇರುಪೇಟೆಯ ವಹಿವಾಟು ಸತತ ಎರಡನೇ ದಿನವಾದ ಗುರುವಾರ 123.07 ಅಂಕಗಳಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಷೇರುಪೇಟೆ ಸಂವೇದಿ ಸೂಚ್ಯಂಕ 123.07 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ 54,717.24 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಎನ್ ಎಸ್ ಇ ನಿಫ್ಟಿ 35.80 ಅಂಕ ಏರಿಕೆಯೊಂದಿಗೆ ದಾಖಲೆಯ 16,294.60ರ ಗಡಿ ತಲುಪಿದೆ.

ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ಏರಿಕೆಯ ಪರಿಣಾಮ ಭಾರ್ತಿ ಏರ್ ಟೆಲ್, ಐಟಿಸಿ, ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್ ಮತ್ತು ಎಚ್ ಸಿಎಲ್ ಟೆಕ್ ಷೇರುಗಳು ಲಾಭಗಳಿಸಿದೆ.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ದಾಖಲೆಯ ಏರಿಕೆಯ ಪರಿಣಾಮ ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ರೂಪಾಯಿ ಲಾಭವಾಗಿದ್ದು, ದೇಶೀಯ ಐಟಿ ಮತ್ತು ಮೆಟಲ್ ಷೇರುಗಳು ಕೂಡ ಹೆಚ್ಚಿನ ಲಾಭಾಂಶ ಕಂಡಿರುವು ದಾಗಿ ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.