Thursday, 12th December 2024

ಷೇರುಪೇಟೆಯ ಸೆನ್ಸೆಕ್ಸ್ 462 ಅಂಕ ಏರಿಕೆ

ಮುಂಬೈ: ಜಾಗತಿಕ ಷೇರುಮಾರುಕಟ್ಟೆಯ ವಹಿವಾಟಿನ ಪರಿಣಾಮ ಶುಕ್ರವಾರ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 462 ಅಂಕ ಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು.

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 452.26 ಅಂಕ ಏರಿಕೆಯೊಂದಿಗೆ 52,727.98 ಅಂಕಗಳಲ್ಲಿ, ಎನ್ ಎಸ್ ಇ ನಿಫ್ಟಿ 142.60 ಅಂಕ ಏರಿಕೆಯಾಗಿದ್ದು, 15,699.30 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಸೆನ್ಸೆಕ್ಸ್ ಏರಿಕೆಯಿಂದ ಮಹೀಂದ್ರ ಆಯಂಡ್ ಮಹೀಂದ್ರ, ಹೀರೊ ಮೋಟೊ ಕಾರ್ಪ್, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಎಚ್ ಯುಎಲ್ ಷೇರುಗಳು ಲಾಭಗಳಿಸಿದೆ.

ಕಚ್ಛಾ ತೈಲದ ಬೆಲೆ 0.54ರಷ್ಟು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್ ಬೆಲೆ 8,178 ರೂಪಾಯಿ ಆಗಿದೆ.