Sunday, 15th December 2024

ಸೆನ್ಸೆಕ್ಸ್ 250 ಪಾಯಿಂಟ್ಸ್ ಜಿಗಿತ

share Market

ಮುಂಬೈ: ಭಾರತೀಯ ಷೇರುಪೇಟೆ ಬುಧವಾರ ಭರ್ಜರಿ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ 250 ಪಾಯಿಂಟ್ಸ್ ಜಿಗಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ 70 ಪಾಯಿಂಟ್ಸ್‌ ಏರಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 252.88 ಪಾಯಿಂಟ್ಸ್ ಹೆಚ್ಚಾಗಿ 56055.26 ಏರಿಕೆಗೊಂಡಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 69.7 ಪಾಯಿಂಟ್ಸ್ ಅಥವಾ ಶೇಕಡಾ 0.42ರಷ್ಟು ಏರಿಕೆಗೊಂಡು 16684.10 ಪಾಯಿಂಟ್ಸ್ ತಲುಪಿದೆ. ಆರಂಭದಲ್ಲಿ 1,092 ಷೇರುಗಳು ಏರಿಕೆಗೊಂಡರೆ, 699 ಷೇರುಗಳು ಕುಸಿದಿವೆ ಮತ್ತು 79 ಷೇರು ಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು 45 ರೂಪಾಯಿ ಏರಿಕೆಯಾಗಿ 1,559.45 ರೂ. ತಲುಪಿದೆ. ಐಷರ್ ಮೋಟಾರ್ಸ್‌ ಷೇರುಗಳು 41 ರೂಪಾಯಿ ಏರಿಕೆ ಗೊಂಡು 556.60 ರೂಪಾಯಿಗೆ ಜಿಗಿದಿದೆ. ಎಚ್‌ಡಿಎಫ್‌ಸಿ ಷೇರುಗಳು 25 ರಷ್ಟು ರೂಪಾಯಿ 2,763.85 ರೂ., ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ರೂ. 76 ರಷ್ಟು ಏರಿಕೆಯಾಗಿ 7,485.00 ರೂ. ಪ್ರಾರಂಭವಾಯಿತು.

ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಷೇರುಗಳು 8 ರೂಪಾಯಿ ಇಳಿಕೆಯಾಗಿ 735.80 ರೂಪಾಯಿಗೆ ಆರಂಭವಾಯಿತು. ಟಾಟಾ ಸ್ಟೀಲ್ ನ ಷೇರುಗಳು ಸುಮಾರು 10 ರೂ. ಕುಸಿದು 1,494.20 ಕ್ಕೆ ಪ್ರಾರಂಭವಾದವು. ಟಾಟಾ ಮೋಟಾರ್ಸ್ ನ ಷೇರುಗಳು 295 ರೂಪಾಯಿಗೆ ಇಳಿಕೆಯಾಗಿದ್ದು, ವಿಪ್ರೋ ಷೇರುಗಳು ರೂ. 630.90 ಕ್ಕೆ ಪ್ರಾರಂಭವಾದವು. ಐಸಿಐಸಿಐ ಬ್ಯಾಂಕ್‌ನ ಷೇರುಗಳು ಸುಮಾರು 697.10 ರೂ. ಆರಂಭವಾಗಿದೆ.

ಭಾರತೀಯ ರೂಪಾಯಿ ಬುಧವಾರ ಡಾಲರ್‌ಗೆ 74.31 ರಷ್ಟು ಏರಿಕೆಗೊಂಡಿದೆ. ಡಾಲರ್ ಎದುರು ರೂಪಾಯಿ 5 ಪೈಸೆ ಬಲದೊಂದಿಗೆ 74.31 ರೂ. ಆಗಿದ್ದು, ಅದೇ ಸಮಯದಲ್ಲಿ, ಮಂಗಳವಾರ ರೂಪಾಯಿ 10 ಪೈಸೆ ಬಲಗೊಂಡು ಡಾಲರ್ ಎದುರು 74.35 ರೂ. ತಲುಪಿದೆ.