Thursday, 12th December 2024

ಷೇರುಪೇಟೆಯ ಸಂವೇದಿ ಸೂಚ್ಯಂಕ 500 ಅಂಕ ಇಳಿಕೆ

ಮುಂಬೈ: ದುರ್ಬಲ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 500 ಅಂಕ  ಇಳಿಕೆ ಯಾಗಿದೆ.

ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಬಿಎಸ್ ಇ ಸಂವೇದಿ ಸೂಚ್ಯಂಕ 380.55ಕ್ಕೂ ಅಧಿಕ ಅಂಕಗಳ ಕುಸಿತ ಕಂಡಿದ್ದು, 51,981.75 ಅಂಕಗಳೊಂದಿಗೆ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ 112 ಅಂಕ ಇಳಿಕೆಯಾಗಿದ್ದು, 15,574.45ರ ಗಡಿಗೆ ಕುಸಿದಿದೆ.

ಸೆನ್ಸೆಕ್ಸ್ ಕುಸಿತದಿಂದ ಮಹೀಂದ್ರ ಆಯಂಡ್ ಮಹೀಂದ್ರ, ಐಸಿಐಸಿಐ ಬ್ಯಾಂಕ್, ಆಲ್ಟ್ರಾಟೆಕ್ ಸಿಮೆಂಟ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಭಾರೀ ನಷ್ಟ ಅನುಭವಿಸಿದೆ. ಸೆನ್ಸೆಕ್ಸ್ ಇಳಿಕೆಯಿಂದ ಆಟೋ ಮತ್ತು ಫೈನಾಶ್ಶಿ ಯಲ್ ಷೇರುಗಳು ಭಾರೀ ನಷ್ಟ ಅನುಭವಿಸಿದೆ.