Thursday, 12th December 2024

ಸೆನ್ಸೆಕ್ಸ್ 14.25 ಪಾಯಿಂಟ್ಸ್ ಏರಿಕೆ, ಇಕ್ವಿಟಿ ಮಾರುಕಟ್ಟೆಯಲ್ಲಿ ರೂಪಾಯಿ 74.36 ಕ್ಕೆ ಕೊನೆ

ಮುಂಬೈ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 14.25 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 26.30 ರಷ್ಟು ಹೆಚ್ಚಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 14.25 ಪಾಯಿಂಟ್ಸ್‌ ಹೆಚ್ಚಾಗಿ 52588.71 ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 26.30 ಪಾಯಿಂಟ್ಸ್‌ ಹೆಚ್ಚಾಗಿ 15,772.80 ಮುಟ್ಟಿದೆ. ದಿನದ ವಹಿವಾಟು ಅಂತ್ಯಕ್ಕೆ 1839 ಷೇರುಗಳು ಏರಿಕೆಗೊಂಡರೆ, 1136 ಷೇರುಗಳು ಕುಸಿದಿವೆ.

ಮಾರುತಿ ಸುಜುಕಿ, ಯುಪಿಎಲ್, ಶ್ರೀ ಸಿಮೆಂಟ್ಸ್, ವಿಪ್ರೊ ಮತ್ತು ಎಸ್‌ಬಿಐ ಲೈಫ್ ಇನ್ಶುರೆನ್ಸ್ ಏರಿಕೆಗೊಂಡಿದೆ. ಬಿಎಸ್‌ಇ ಮಿಡ್‌ ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ವಹಿವಾಟಿನ ಮಧ್ಯೆ ಭಾರತೀಯ ರೂಪಾಯಿ ಆರಂಭಿಕ ನಷ್ಟವನ್ನು ವಿಸ್ತರಿಸಿ, ಕನಿಷ್ಠ 74.36 ಕ್ಕೆ ಕೊನೆಗೊಂಡಿತು.