Sunday, 15th December 2024

ಸೂಚ್ಯಂಕದಲ್ಲಿ 28.73 ಅಂಕ ಇಳಿಕೆ

ಮುಂಬೈ: ಮುಂಬೈ ಷೇರುಪೇಟೆಯ ವಹಿವಾಟು ಬುಧವಾರ ಏರಿಳಿತದಲ್ಲಿ ಅಂತ್ಯಗೊಂಡಿದೆ. ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 28.73 ಅಂಕ ಇಳಿಕೆ ಹಾಗೂ ನಿಫ್ಟಿಯಲ್ಲಿ ಕೇವಲ 2.20ರಷ್ಟು ಏರಿಕೆ ಕಂಡಿದೆ.

ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 28.73 ಅಂಕ ಇಳಿಕೆಯೊಂದಿಗೆ 54,525.93 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದೆ. ಎನ್ ಎಸ್ ಇ ನಿಫ್ಟಿ ಕೇವಲ 2.20 ಅಂಕ ಏರಿಕೆಯಾಗಿದ್ದು, 16,282.30 ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿದೆ.

ಸೆನ್ಸೆಕ್ಸ್ ಏರಿಕೆಯಿಂದ ಟಾಟಾ ಸ್ಟೀಲ್, ಪವರ್ ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್, ಜೆಎಸ್ ಡಬ್ಲ್ಯು ಸ್ಟೀಲ್, ಐಒಸಿ, ಎನ್ ಟಿಪಿಸಿ ಮತ್ತು ಹಿಂಡಲ್ಕೋ ಷೇರುಗಳು ಲಾಭಗಳಿಸಿದೆ.