Thursday, 12th December 2024

ಷೇರು ಪೇಟೆಯಲ್ಲಿ ಭರ್ಜರಿ ಓಟ: ಸೆನ್ಸೆಕ್ಸ್ 1318.64 ಪಾಯಿಂಟ್ ಏರಿಕೆ

ಮುಂಬೈ: ಕೇಂದ್ರ ಬಜೆಟ್ 2021 ಮಂಡಿಸಿದ ಮರು ದಿನ ಷೇರು ಪೇಟೆಯಲ್ಲಿ ಭರ್ಜರಿ ಓಟ ಮುಂದುವರಿದಿದೆ.

ಮಂಗಳವಾರದ ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 1318.64 ಪಾಯಿಂಟ್ ಗಳಷ್ಟು ಮೇಲೇರಿ 49,919.25ರಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ 50 ಸೂಚ್ಯಂಕ 378.05 ಪಾಯಿಂಟ್ ನಷ್ಟು ಹೆಚ್ಚಳವಾಗಿ, 14,659.25 ಪಾಯಿಂಟ್ ನಲ್ಲಿತ್ತು.

34,300 ಪಾಯಿಂಟ್ ಗಡಿ ದಾಟಿ ವ್ಯವಹಾರ ನಡೆಸುತ್ತಿರುವ ಬ್ಯಾಂಕ್ ನಿಫ್ಟಿ ಹೊಸ ಎತ್ತರಕ್ಕೆ ಏರಿದೆ. ಜಾಗತಿಕ ಮಾರುಕಟ್ಟೆಗಳ ಪ್ರಭಾವದಿಂದ ಭಾರತದ ಷೇರುಪೇಟೆಯಲ್ಲೂ ಉತ್ಸಾಹ ಕಂಡುಬರುತ್ತಿದೆ.