Thursday, 12th December 2024

ಷೇರುಪೇಟೆ ವಹಿವಾಟು ಅಂತ್ಯ: ಸೂಚ್ಯಂಕ 476 ಅಂಕ ಏರಿಕೆ

ಮುಂಬೈ: ಅಮೆರಿಕದ ಹಣದುಬ್ಬರದ ಏರಿಳಿಕೆಯ ಕಳವಳದ ನಡುವೆಯೂ ಹೂಡಿಕೆದಾರರ ಖರೀದಿಯ ಭರಾಟೆಯ ಪರಿಣಾಮ ಬುಧವಾರ ಷೇರುಪೇಟೆಯ ಸೆನ್ಸೆಕ್ಸ್ ಹಾಗೂ ನಿಫ್ಟಿ ದಾಖಲೆಯ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 476 ಅಂಕ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ 58,723.20 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಎನ್ ಎಸ್ ಇ ನಿಫ್ಟಿ 139 ಅಂಕ ಏರಿಕೆಯೊಂದಿಗೆ ದಾಖಲೆಯ 17,519.45 ಅಂಕಗಳ ಗಡಿ ತಲುಪಿದೆ.

ಸೆನ್ಸೆಕ್ಸ್, ನಿಫ್ಟಿ ಜಿಗಿತದ ಪರಿಣಾಮ ಎನ್ಟಿಪಿಸಿ, ಭಾರ್ತಿ ಏರ್ ಟೆಲ್, ಎಚ್ ಸಿಎಲ್ ಟೆಕ್, ಟೈಟಾನ್, ಎಸ್ ಬಿಐ, ಪವರ್ ಗ್ರಿಡ್, ಟಿಸಿಎಸ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಇನ್ಫೋಸಿಸ್ ಷೇರುಗಳು ಭರ್ಜರಿ ಲಾಭಗಳಿಸಿವೆ.