Sunday, 15th December 2024

ಸೆನ್ಸೆಕ್ಸ್‌ 556 ಅಂಕ ಕುಸಿತ

ಮುಂಬಯಿ: ಭಾರತೀಯ ಷೇರು ಪೇಟೆ ಸೂಚ್ಯಂಕಗಳು ಸೋಮವಾರ ಬೆಳಗ್ಗೆಯಿಂದಲೇ ಕುಸಿದಿವೆ.

ಜಾಗತಿಕ ಬ್ಯಾಂಕಿಂಗ್‌ ಬಿಕ್ಕಟ್ಟು, ಸ್ವಿಜರ್ಲೆಂಡ್‌ ಮೂಲದ ಕ್ರೆಡಿಟ್‌ ಸ್ವೀಸ್‌ ಅನ್ನು ಯುಬಿಎಸ್‌ ಗ್ರೂಪ್‌ ಖರೀದಿಸಿರುವ ವಿದ್ಯಮಾನ ನಕಾರಾತ್ಮಕ ಪ್ರಭಾವ ಬೀರಿದೆ.

ಎಲ್ಲ 13 ಪ್ರಮುಖ ವಲಯಾವಾರು ಸೂಚ್ಯಂಕಗಳು ಮುಗ್ಗರಿಸಿತು. ಮಧ್ಯಾಹ್ನ ಸೆನ್ಸೆಕ್ಸ್‌ 556 ಅಂಕ ಕುಸಿದು 57,433ಕ್ಕೆ ಇಳಿಕೆಯಾದರೆ, ನಿಫ್ಟಿ 169 ಅಂಕ ಕುಸಿದು 16,930 ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು.

ಅಮೆರಿಕ ಮತ್ತು ಯುರೋಪ್‌ನಲ್ಲಿ ಬ್ಯಾಂಕಿಂಗ್‌ ಬಿಕ್ಕಟ್ಟು ಸಂಭವಿಸಿದ್ದು, ಏಷ್ಯಾದ್ಯಂತ ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು. ಬ್ಯಾಂಕಿಂಗ್‌, ಹಣಕಾಸು, ಐಟಿ ಷೇರುಗಳ ದರ ಇಳಿಯಿತು. ಇನ್ಫೋಸಿಸ್‌, ಟಿಸಿಎಸ್‌ ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳು ನಷ್ಟಕ್ಕೀಡಾ ಯಿತು.

ಕಳೆದ ಮೂರು ತಿಂಗಳುಗಳಿಂದ ನಿಫ್ಟಿ 50 ಇಂಡೆಕ್ಸ್‌ ತನ್ನ ಉನ್ನತ ಮಟ್ಟದಿಂದ 10% ಇಳಿಕೆ ದಾಖಲಿಸಿದೆ. 136 ಷೇರುಗಳು 52 ವಾರಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಕನಿಷ್ಠ 51 ಷೇರುಗಳ ದರಗಳಲ್ಲಿ 20% ಇಳಿಕೆಯಾಗಿದೆ.