Friday, 22nd November 2024

ಸಂಸತ್‌ ಕಲಾಪ ನಾಳೆಗೆ ಮುಂದೂಡಿಕೆ

ನವದೆಹಲಿ: ಸೋಮವಾರ ಆರಂಭವಾದ ಸಂಸತ್‌ ಕಲಾಪಕ್ಕೆ ಆರಂಭದಲ್ಲೇ ವಿಪಕ್ಷಗಳಿಂದ ಉಂಟಾದ ಗದ್ದಲದಿಂದ ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಮಧ್ಯಾಹ್ನದ ಬಳಿಕವೂ ಕಲಾಪ ಆರಂಭವಾದಾಗ, ವಿಪಕ್ಷ ಗದ್ದಲ ಮಾಡಿದ್ದು, ಮಂಗಳವಾರಕ್ಕೆ ಕಲಾಪ ಮುಂದೂಡಬೇಕಾಗಿ ಬಂತು. ಜುಲೈ 19ರಿಂದ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಆಗಸ್ಟ್‌ 13ರಂದು ಮುಕ್ತಾಯವಾಗಲಿದೆ. ಮುಂಗಾರು ಅಧಿವೇಶನಕ್ಕೆ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆದ ನಂತರ ನಡೆಸಲಾಗು ತ್ತಿರುವ ಮೊದಲ ಮುಂಗಾರು ಅಧಿವೇಶನ ಇದಾಗಿದೆ.

ಸದ್ಯಕ್ಕೆ ದೇಶದಲ್ಲಿನ ಪ್ರಮುಖ ಸಮಸ್ಯೆಗಳಾದ ಇಂಧನ ಬೆಲೆ ಏರಿಕೆ, ಕೊರೊನಾ ನಿರ್ವಹಣೆ, ರೈತರ ಪ್ರತಿಭಟನೆ, ಲಸಿಕೆಯ ಕೊರತೆಯಂಥ ವಿಚಾರಗಳನ್ನು ಚರ್ಚೆ ಮಾಡುವ ಸಾಧ್ಯತೆಯಿದೆ.