Thursday, 12th December 2024

ಕೊರೋನಾ ನಿಯಂತ್ರಣಕ್ಕಾಗಿ ’ಶಾ’ ತುರ್ತು ಸಭೆ

ನವದೆಹಲಿ: ನವದೆಹಲಿಯಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಸಭೆ ಕರೆದಿದ್ದಾರೆ.

ಸಂಜೆ ದೆಹಲಿಯ ಉತ್ತರ ಬ್ಲಾಕ್’ನಲ್ಲಿ ಸಭೆ ನಡೆಯಲಿದ್ದು, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಇತರೆ ಉನ್ನತಾಧಿಕಾರಿಗಳು ಭಾಗಿಯಾಗ ಲಿದ್ದಾರೆಂದು ವರದಿಯಾಗಿದೆ.

ಕೊರೋನಾ ಸೋಂಕು ಹೆಚ್ಚುವುದರ ಜೊತೆಗೆ, ದೀಪಾವಳಿ ನಿಯಮ ಉಲ್ಲಂಘನೆಯಿಂದಾಗಿ ವಾಯು ಗುಣಮಟ್ಟ ಕೂಡ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಕೊರೋನಾ ನಿರ್ವಹಣೆ ವಿಚಾರದಲ್ಲಿ ಶಾ ಅವರು ಎರಡನೇ ಬಾರಿ ಮಧ್ಯಪ್ರವೇಶ ಮಾಡು ತ್ತಿದ್ದಾರೆ. ಕಳೆದ ಜೂನ್ ಹಾಗೂ ಜುಲೈ ತಿಂಗಳಿನಲ್ಲಿಯೂ ಸಭೆಗಳನ್ನು ನಡೆಸಿದ್ದರು.