ಲಂಡನ್: ಬಾಲಿವುಡ್‌ನ(Bollywood) ಸೂಪರ್‌ಸ್ಟಾರ್ ನಟ ಶಾರುಖ್ ಖಾನ್(Sha Rukh Khan) ಅವರ ಲಂಡನ್‌ನಲ್ಲಿನ ಐಷಾರಾಮಿ ಬಂಗಲೆಯ(Lavish London House) ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತಮ್ಮ ನಟನ ಮನೆಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಲಂಡನ್‌ನಲ್ಲಿರುವ ಶಾರುಖ್ ಅವರ ಅಲ್ಟ್ರಾ-ಐಷಾರಾಮಿ ಅದ್ಧೂರಿ ಬಂಗಲೆಯ ಅಪರೂಪದ ವಿಡಿಯೊ ಸಖತ್ ವೈರಲ್ ಆಗಿದೆ(Viral Video)
ಇತ್ತೀಚೆಗೆ ವೈರಲ್ ಆಗಿರುವ ಶಾರುಖ್ ಖಾನ್ ಅವರ ಐಷಾರಾಮಿ ಲಂಡನ್ ನಿವಾಸದ ವಿಡಿಯೊವನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಬಂಗಲೆಯ ಹೊರಭಾಗದ ವಿಡಿಯೊವನ್ನು ವ್ಲೋಗರ್ ಮಾಡಿರುವ ದಂಪತಿ ಹಂಚಿಕೊಂಡಿದ್ದಾರೆ.
ಎಸ್‌ಆರ್‌ಕೆ ಭವ್ಯ ಬಂಗಲೆ ಹೇಗಿದೆ ಗೊತ್ತಾ?
ಹಿಂದಿ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಟರಲ್ಲಿ ಒಬ್ಬರಾದ ಶಾರುಖ್ ಖಾನ್ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಬಾಲಿವುಡ್‌ನ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್ ಬಹು ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಸೆಲೆಬ್ರಿಟಿಗಳ ಒಡೆತನದ ಐಷಾರಾಮಿ ಮನೆಗಳು ಮತ್ತು ಅವರ ಶ್ರೀಮಂತ ಜೀವನಶೈಲಿಯು ಟಾಪ್ ಸ್ಟಾರ್‌ಗಳ ಜೀವನಶೈಲಿಯಂತೆ ಇರುತ್ತದೆ. ಈ ನಡುವೆ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಐಷಾರಾಮಿ ಲಂಡನ್ ಮನೆಯ ವಿಡಿಯೊ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.
ಬ್ರಿಟನ್ ರಾಜಧಾನಿಯ ಹೃದಯ ಭಾಗದಲ್ಲಿರುವ ಈ ಭವ್ಯವಾದ ಮನೆ ಶಾರುಖ್ ಖಾನ್ ಮತ್ತು ಅವರ ಕುಟುಂಬಕ್ಕೆ ರಜೆಯ ತಾಣವಾಗಿದೆ. ಇನ್‌ಸ್ಟಾಗ್ರಾಂ ವ್ಲೋಗರ್ ದಂಪತಿ ಶಾರೂಖ್ ಖಾನ್ ಅವರ ಲಂಡನ್ ಮನೆಯ ಸುತ್ತಲೂ ತೋರಿಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ತೋರಿಸಿರುವ ಐಷಾರಾಮಿ ಮಹಲು ಲಂಡನ್‌ನ ಅತ್ಯಂತ ದುಬಾರಿ ಜಾಗದಲ್ಲಿ ಕಟ್ಟಲಾಗಿದೆ. ಆ ಮಹಲು ಲಂಡನ್‌ನಲ್ಲಿರುವ ಶಾರುಖ್ ಖಾನ್ ಅವರ ಮನೆಯಾಗಿದ್ದು,ಇದರ ಬೆಲೆ ಸುಮಾರು 210 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಇದು ಬಾಲಿವುಡ್ ನಟರೊಬ್ಬರು ವಿದೇಶದಲ್ಲಿ ಮನೆ ಹೊಂದಲು ಖರ್ಚು ಮಾಡಿದ ಅತಿ ಹೆಚ್ಚು ಮೊತ್ತವಾಗಿದೆ ಎಂದು ಹೇಳಲಾಗಿದೆ. ಮನೆಯ ವಿಳಾಸ 117 ಪಾರ್ಕ್ ಲೇನ್, ಲಂಡನ್, W1K 7AH. ವರದಿಯೊಂದರ ಪ್ರಕಾರ ಇಡೀ ಮನೆ ಶಾರುಖ್ ಖಾನ್ ಅವರದ್ದಲ್ಲ ಆದರೆ ಅವರ ಫ್ಲಾಟ್ ನೆಲ ಮಹಡಿಯಲ್ಲಿದೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಅಮೆರಿಕದ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿರುವ ಶಾರುಖ್ ಖಾನ್ ಅವರ ಮನೆಯ ಮತ್ತೊಂದು ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಲು 3 ಮಲಗುವ ಕೋಣೆಗಳು ಮತ್ತು 6 ಸ್ನಾನಗೃಹಗಳನ್ನು ಹೊಂದಿದೆ. ಕಟ್ಟಡದ ಬಾಡಿಗೆ ಒಂದು ರಾತ್ರಿಗೆ ಬರೋಬ್ಬರಿ 2 ಲಕ್ಷ ರೂ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Kerala Nurse: ಕೇರಳದ ನರ್ಸ್‌ಗೆ ಯೆಮೆನ್‌ನಲ್ಲಿ ಮರಣದಂಡನೆ… ನೆರವಿಗೆ ಮುಂದಾದ ಭಾರತ! ಏನಿದು ಪ್ರಕರಣ?