Saturday, 14th December 2024

ಷೇರು: ಸಂವೇದಿ ಸೂಚ್ಯಂಕ, ನಿಫ್ಟಿ ವ್ಯವಹಾರ ನಷ್ಟದಲ್ಲೇ ಅಂತ್ಯ

ಮುಂಬಯಿ: ಕೋವಿಡ್ ಸೋಂಕು ಹೆಚ್ಚಳ ಹಾಗೂ ಲಾಕ್ ಡೌನ್ ಜಾರಿ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ.

ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಸತತ ಮಂಗಳವಾರ ನಷ್ಟದಲ್ಲಿಯೇ ವಹಿವಾಟು ಮುಕ್ತಾಯಗೊಳಿಸಿದೆ.

ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 243.62 ಅಂಕ ಕುಸಿತ ಕಂಡಿದ್ದು, 47,705.80 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಕಂಡಿದೆ. ಬೆಳಗ್ಗಿನ ವಹಿವಾಟಿನಲ್ಲಿ ಎನ್ ಎಸ್ ಇ ನಿಫ್ಟಿ 167 ಅಂಕ ಏರಿಕೆ ಕಂಡಿದ್ದು, 14,500ರ ಗಡಿ ತಲುಪಿತ್ತು.

ಆದರೆ ದಿನಾಂತ್ಯದ ವಹಿವಾಟಿನಲ್ಲಿ 63.05 ಅಂಕ ಕುಸಿತ ಕಂಡಿದ್ದು, 14,296.40 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. ಸೆನ್ಸೆಕ್ಸ್ ಕುಸಿತದ ಪರಿಣಾಮ ಆಲ್ಟ್ರಾಟೆಕ್ ಸಿಮೆಂಟ್, ಎಚ್ ಸಿಎಲ್ ಟೆಕ್, ಎಚ್ ಡಿಎಫ್ ಸಿ, ಟೆಕ್ ಮಹೀಂದ್ರಾ, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಎಚ್ ಯುಎಲ್ ಷೇರುಗಳು ನಷ್ಟ ಅನುಭವಿಸಿದೆ.

ಏತನ್ಮಧ್ಯೆ ಬಜಾಜ್ ಫಿನ್ ಸರ್ವ್, ಡಾ.ರೆಡ್ಡೀಸ್, ಬಜಾಜ್ ಫೈನಾನ್ಸ್, ಬಜಾಜ್ ಆಟೋ ಮತ್ತು ಮಾರುತಿ ಷೇರುಗಳು ಲಾಭ ಗಳಿಸಿವೆ. ಕೋವಿಡ್ ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ಕೆಲವು ರಾಜ್ಯಗಳು ನಿರ್ಬಂಧಗಳನ್ನು ಘೋಷಿಸಿರುವುದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿರುವುದಾಗಿ ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.