Thursday, 12th December 2024

77 ಅಂಕ ಏರಿಕೆಯೊಂದಿಗೆ ಷೇರು ವ್ಯವಹಾರ ಮುಕ್ತಾಯ

ಮುಂಬೈ: ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಷೇರುಪೇಟೆಯ 77ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 76.77 ಅಂಕ ಏರಿಕೆಯಾಗಿದ್ದು, 52,551.53 ಅಂಕದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಎನ್ ಎಸ್ ಇ ನಿಫ್ಟಿ 12.50 ಅಂಕ ಏರಿಕೆಯಾಗಿದ್ದು, 15,811.85ರ ಗಡಿ ದಾಟಿದೆ.

ಸೆನ್ಸೆಕ್ಸ್ ಏರಿಕೆಯಿಂದ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಒಎನ್ ಜಿಸಿ, ಇನ್ಫೋಸಿಸ್, ಪವರ್ ಗ್ರಿಡ್, ಎಲ್ ಆಯಂಡ್ ಟಿ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭಗಳಿಸಿವೆ.

ಬೆಳಗ್ಗೆ ವಹಿವಾಟಿನಲ್ಲಿ ಷೇರು ಸೂಚ್ಯಂಕ ಹಾಗೂ ನಿಫ್ಟಿ ಕೂಡ ಇಳಿಕೆಯಾಗಿತ್ತು.