Sunday, 15th December 2024

ಷೇರುಪೇಟೆ ಸೆನ್ಸೆಕ್ಸ್‌: 217 ಪಾಯಿಂಟ್ ಕುಸಿತ, ಎನ್‌ಎಸ್‌ಇನಲ್ಲೂ ಇಳಿಕೆ

ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 217 ಪಾಯಿಂಟ್ ಕುಸಿದಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಕುಸಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 265.84 ಪಾಯಿಂಟ್ಸ್‌ ಕುಸಿದು 47,814 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 57.85 ಪಾಯಿಂಟ್ಸ್‌ ಇಳಿಕೆಗೊಂಡು 14,351 ಪಾಯಿಂಟ್ಸ್ ತಲುಪಿದೆ.

ಸುಮಾರು 572 ಷೇರುಗಳು ಏರಿಕೆಗೊಂಡರೆ, 307 ಷೇರುಗಳು ಕುಸಿದರೆ, 70 ಕಂಪನಿಗಳ ಷೇರು ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಟಾಟಾ ಸ್ಟೀಲ್ ಷೇರುಗಳು ಸುಮಾರು 12 ರೂಪಾಯಿ ಹೆಚ್ಚಾಗಿ 933.75 ರೂ. ತಲುಪಿದ್ದು, ಡಾ. ರೆಡ್ಡಿ ಲ್ಯಾಬ್‌ನ ಷೇರುಗಳು ಸುಮಾರು 47 ರೂ.ಗಳಿಂದ 5,246.75 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 5 ರಿಂದ 645.30 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು ಸುಮಾರು 3 ರೂ ಗಳಿಸಿ 206.40 ರೂ., ಏಷ್ಯನ್ ಪೇಂಟ್ಸ್ ಷೇರುಗಳು 19 ರೂ.ಗಳಿಂದ 2,530.40 ರೂ. ತಲುಪಿದೆ.