Saturday, 14th December 2024

ಷೇರುಪೇಟೆ ಭರ್ಜರಿ ವ್ಯವಹಾರ: ಸೆನ್ಸೆಕ್ಸ್ 1000 ಪಾಯಿಂಟ್ಸ್‌ ಜಿಗಿತ

ಮುಂಬೈ: ಭಾರತೀಯ ಷೇರುಪೇಟೆ ಬುಧವಾರ ಭರ್ಜರಿ ವ್ಯವಹಾರ ಮಾಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1000 ಪಾಯಿಂಟ್ಸ್‌ ಜಿಗಿತ ಸಾಧಿಸಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 274 ಪಾಯಿಂಟ್ಸ್ ಏರಿಕೆ ಕಂಡಿದೆ.

ತಾಂತ್ರಿಕ ತೊಂದರೆಯಿಂದಾಗಿ ಎನ್‌ಎಸ್‌ಇ ಸ್ಥಗಿತಗೊಂಡ ಬಳಿಕ ಮಧ್ಯಾಹ್ನ ಪುನಾರಂಭಗೊಂಡಿತು. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 1,030 ಪಾಯಿಂಟ್ಸ್ ಏರಿಕೆಗೊಂಡು 50,781.69 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 274 ಪಾಯಿಂಟ್ಸ್ ಹೆಚ್ಚಳಗೊಂಡು 14,982 ಪಾಯಿಂಟ್ಸ್‌ಗೆ ಜಿಗಿದಿದೆ.

ನಿಫ್ಟಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಸೂಚ್ಯಂಕಗಳು ತಲಾ 4 ಪ್ರತಿಶತದಷ್ಟು ಏರಿದರೆ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು 3 ಪ್ರತಿಶತದಷ್ಟು ಜಿಗಿದಿದೆ.