ತಿರುವನಂತಪುರ: ಕೇರಳದ ಕಣ್ಣೂರು ಜಿಲ್ಲೆಯ ಶತಾಯುಷಿ ಮಹಿಳೆಯೊಬ್ಬರು 11 ದಿನಗಳಲ್ಲಿ ಕರೋನಾವನ್ನು ಸೋಲಿಸಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ.
104 ವರ್ಷದ ಜಾನಕಿ ಅಮ್ಮ ಮೇ 31 ರಂದು ಪರಿಯಾರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಈ ಶತಾಯುಷಿ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು” ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಆಮ್ಲಜನಕದ ಮಟ್ಟದಲ್ಲಿ ತೀವ್ರ ಕುಸಿತದ ಹಿನ್ನೆಲೆಯಲ್ಲಿ ಜಾನಕಿ ಅಮ್ಮರನ್ನು ತಾಲಿಪರಂಬದಲ್ಲಿರುವ ಕೋವಿಡ್ ಆರೈಕೆ ಕೇಂದ್ರ ದಿಂದ ವೈದ್ಯಕೀಯ ಕಾಲೇಜು ಐಸಿಯುಗೆ ದಾಖಲು ಮಾಡಲಾಗಿತ್ತು. ಆದರೆ 11 ದಿನಗಳಲ್ಲಿ ಕರೋನಾವನ್ನು ಸೋಲಿಸಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.
ಕೊರೊನಾ ಗೆದ್ದ ಈ ಶತಾಯುಷಿ ಮಹಿಳೆಯನ್ನು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಭಿನಂದಿಸಿದ್ದಾರೆ. ಇನ್ನು ಜಾನಕಿ ಅಮ್ಮ ಕೊರೊನಾದಿಂದ ಗುಣಮುಖರಾಗಲು ತಮ್ಮ ಆರೈಕೆಯ ಮೂಲಕ ಸಹಾಯ ಮಾಡಿದ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಗಳನ್ನು ಸಚಿವರು ಶ್ಲಾಘಿಸಿದ್ದಾರೆ.