ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸಿನ್, ರೀಶಾನ್ ತಾಜುದ್ದೀನ್ ಶೇಖ್, ಹುಜೈರ್ ಫರ್ಹಾನ್ ಬೇಗ್, ಮಜಿನ್ ಅಬ್ದುಲ್ ರಹಮಾನ್, ನದೀಮ್ ಅಹ್ಮದ್ ಕೆ ಎ, ಜಬೀವುಲ್ಲಾ ಮತ್ತು ನದೀಮ್ ಫೈಜಲ್ ಎನ್ ವಿರುದ್ಧ ಯುಎ(ಪಿ) ಕಾಯ್ದೆ 1967, IPC ಮತ್ತು ಕರ್ನಾಟಕ ರಾಜ್ಯ ವಿನಾಶ ಮತ್ತು ಆಸ್ತಿ ನಷ್ಟ ತಡೆ ಕಾಯ್ದೆ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಎನ್ ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ಶಿವಮೊಗ್ಗದಲ್ಲಿ ಐಇಡಿ ಸ್ಫೋಟ ನಡೆಸಿ ದ್ದಲ್ಲದೆ, ಹಲವು ಸ್ಥಳಗಳಲ್ಲಿ ವಿಚಕ್ಷಣಾ ಕಾರ್ಯಾಚರಣೆ ನಡೆಸಿ ಆಸ್ತಿ ಪಾಸ್ತಿ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಜನರಲ್ಲಿ ಭಯ ಹುಟ್ಟಿಸಲು ಹಾಗೂ ಜನರಲ್ಲಿ ಭಯ ಹುಟ್ಟಿಸುವ ಸಂಚಿನ ಭಾಗವಾಗಿ ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರದ ಘಟನೆಗಳನ್ನು ನಡೆಸಲು ಮತ್ತು ದೇಶದ ವಿರುದ್ಧ ದಾಳಿ ನಡೆಸಲು ಮುಂದಾಗಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಾಜ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸಿನ್ ವಿರುದ್ಧ ಮಾರ್ಚ್ನಲ್ಲಿಯೂ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಒಂಬತ್ತು ಮಂದಿಯಲ್ಲಿ, ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸಿನ್, ರೀಶಾನ್ ತಾಜುದ್ದೀನ್ ಶೇಖ್, ಮಜಿನ್ ಅಬ್ದುಲ್ ರಹಮಾನ್ ಮತ್ತು ನದೀಮ್ ಅಹ್ಮದ್ ಕೆಎ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ.
ಈ ಪ್ರಕರಣವನ್ನು ಆರಂಭದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸರು 2022ರ ಸೆಪ್ಟೆಂಬರ್ 19ರಂದು ದಾಖಲಿಸಿದ್ದರು. 2022ರ ನವೆಂಬರ್ 15ರಂದು ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿತು.