ಶಾಸಕನ ನಿವಾಸದ ಎದುರು ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಮನೆಗೆ ನುಗ್ಗುವುದಕ್ಕೆ ಶಿವಸೇನೆ ಕಾರ್ಯಕರ್ತರು ಯತ್ನಿಸಿದ್ದಾರೆ.
ಪೊಲೀಸರು ಪಕ್ಷದ ಕಾರ್ಯಕರ್ತರು ಮುನ್ನುಗುವುದನ್ನು ತಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಉದ್ಧವ್ ಠಾಕ್ರೆ ಅವರ ನಿವಾಸ ಮಾತೋಶ್ರೀ ಬಳಿ ಹನುಮಾನ್ ಚಾಲಿಸಾ ಪಠಿಸುವುದಾಗಿ ರಾಣ ಹೇಳಿದ್ದರು. ಇದಕ್ಕೆ ಶಿವಸೇನೆ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಬಾಂದ್ರಾದಲ್ಲಿರುವ ಮುಖ್ಯಮಂತ್ರಿಯವರ ಬಂಗಲೆ ಮತ್ತು ರಾಣಾ ದಂಪತಿಯ ಖಾರ್ ಪ್ರದೇಶದ ಫ್ಲಾಟ್‌ಗೆ ಭದ್ರತೆ ಹೆಚ್ಚಿಸ ಲಾಗಿದೆ.
ಮಹಾರಾಷ್ಟ್ರಕ್ಕೆ ಸಾಡೇಸಾತಿಯಿಂದ ವಿಮೋಚನೆ ಕೊಡಿಸಲು ಮುಖ್ಯಮಂತ್ರಿ ಗಳ ನಿವಾಸ ಮಾತೋಶ್ರೀ ಎದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಬದ್ನೇರಾ ಕ್ಷೇತ್ರದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅಮರಾವತಿಯ ಪಕ್ಷೇತರ ಸಂಸದೆ ನವನೀತ್ ಕೌರ್ ರಾಣಾ ಸವಾಲು ಹಾಕಿದ್ದರು.
ಹೀಗಾಗಿ, ರಾತ್ರಿಯಿಂದಲೂ ಶಿವಸೇನೆ ಕಾರ್ಯಕರ್ತರು ಮಾತೋಶ್ರೀಯ ಹೊರಗೆ ಜಮಾಯಿಸಿದ್ದರು. ರಾಣಾ ದಂಪತಿಯ ಫ್ಲಾಟ್‌ನ ಹೊರಗೂ ಒಂದು ಗುಂಪು ಮೊಕ್ಕಾಂ ಹೂಡಿದೆ.
ಖೇರ್ವಾಡಿ ಪೊಲೀಸ್ ಠಾಣೆಯು ಐಪಿಸಿ ಸೆಕ್ಷನ್ 149 ರ ಅಡಿಯಲ್ಲಿ ರಾಣಾ ದಂಪತಿಗೆ ನೋಟಿಸ್ ನೀಡಿದೆ.