Saturday, 14th December 2024

ಶಿವರಾಜ್‌ ಪಾಟೀಲ್‌ ಸೊಸೆ ಬಿಜೆಪಿ ಸೇರ್ಪಡೆ

ಮುಂಬೈ: ಕಾಂಗ್ರೆಸ್‌ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವರೂ ಆಗಿರುವ ಶಿವರಾಜ್‌ ಪಾಟೀಲ್‌ ಅವರ ಸೊಸೆ ಅರ್ಚನಾ ಪಾಟೀಲ್ ಶನಿವಾರ ಬಿಜೆಪಿ ಸೇರಿದರು.

ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬಾವನ್‌ಕುಲೆ ಅವರ ಸಮ್ಮುಖದಲ್ಲಿ ಕಮಲ ಪಕ್ಷ ಸೇರಿಕೊಂಡರು.

ಮಹಾರಾಷ್ಟ್ರದ ಮರಾಠವಾಡಾ ಪ್ರಾಂತ್ಯದ ಲಾತೂರ್‌ನವರಾದ ಶಿವರಾಜ್‌ ಪಾಟೀಲ್‌ ಅವರು ಯುಪಿಎ-1 ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದರು. ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ (26/11) ಬೆನ್ನಲ್ಲೇ ಅವರು ಸಚಿವ ಸ್ಥಾನದಿಂದ ಕೆಳಗಿಳಿದಿದ್ದರು. ಲೋಕಸಭಾ ಸ್ಪೀಕರ್‌ ಆಗಿಯೂ ಕಾರ್ಯನಿರ್ವಹಿಸಿದ್ದರು.

‘ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅರ್ಚನಾ ಪಾಟೀಲ್‌ ಅವರ ಸೇರ್ಪಡೆಯಿಂದ ಲಾತೂರ್‌ ಮತ್ತು ಮರಾಠವಾಡಾ ಪ್ರದೇಶದಲ್ಲಿ ಬಿಜೆಪಿಯ ಬಲ ಹೆಚ್ಚಲಿದೆ’ ಎಂದು ಫಡಣವೀಸ್‌ ಹೇಳಿದರು.