Sunday, 15th December 2024

ಸರ್ವೀಸ್‌ ಬಂದೂಕಿನಿಂದ ಗುಂಡು ಸಿಡಿತ

ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್‌ ಆವರಣದಲ್ಲಿ ಶುಕ್ರವಾರ ಪೊಲೀಸ್ ಸಿಬ್ಬಂದಿ ಯೊಬ್ಬರ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ.

ಇಬ್ಬರು ವಕೀಲರ ಕಕ್ಷಿಗಾರರ ನಡುವೆ ಜಗಳ ನಡೆಯುತ್ತಿದ್ದ ಸಮಯದಲ್ಲಿ ನಾಗಾಲ್ಯಾಂಡ್‌ ಪೊಲೀಸ್‌ ಸಿಬ್ಬಂದಿಯ ಸರ್ವೀಸ್‌ ಬಂದೂಕಿನಿಂದ ಗುಂಡು ಸಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಿದ್ದಾರೆ.

ಭದ್ರತಾ ಕರ್ತವ್ಯದಲ್ಲಿದ್ದ ನಾಗಾಲ್ಯಾಂಡ್‌ ಪೊಲೀಸ್‌ ಸಿಬ್ಬಂದಿಯು ಇಬ್ಬರು ವಕೀಲರ ಕಕ್ಷಿಗಾರರ ನಡುವಿನ ಜಗಳವನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ ಗುಂಡು ಸಿಡಿದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಂಡು ನೆಲಕ್ಕೆ ಬಡಿದಿದ್ದು, ಯಾರಿಗೂ ಗಾಯ ಆಗಿಲ್ಲ.