Sunday, 15th December 2024

ಎನ್ ಕೌಂಟರ್: ಆರು ನಕ್ಸಲೀಯರ ಹತ್ಯೆ

ಹೈದರಾಬಾದ್: ಬುಧವಾರ ಬೆಳಿಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಆರು ಮಂದಿ ನಕ್ಸಲೀಯರು ಮೃತಪಟ್ಟಿದ್ದಾರೆ ಎಂದು ಆಂಧ್ರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ವಿಶಾಖಪಟ್ಟಣಂ ಜಿಲ್ಲೆಯ ತೀಗಲಾಮೆಟ್ಟ ಅರಣ್ಯಪ್ರದೇಶದಲ್ಲಿ ಸಿಪಿಐ(ಮಾವೋವಾದಿ) ಮತ್ತು ಗ್ರೇಹೌಂಡ್ಸ್ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿರುವುದಾಗಿ ವಿಶಾಖ ಗ್ರಾಮೀಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಎನ್ ಕೌಂಟರ್ ನಲ್ಲಿ ಮಹಿಳೆ ಸೇರಿದಂತೆ ಆರು ಮಂದಿ ನಕ್ಸಲೀಯರ ಶವ ಪತ್ತೆಯಾಗಿದ್ದು, ಎ.ಕೆ.47, ಎಸ್ ಎಲ್ ಆರ್, ಒಂದು ಕಾರ್ಬೈನ್ ಮತ್ತು ಮೂರು 303 ರೈಫಲ್ಸ್ ಅನ್ನು ಘಟನಾ ಸ್ಥಳದಲ್ಲಿ ವಶಪಡಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.