Tuesday, 22nd October 2024

Slowest Animals: ಪ್ರಪಂಚದಲ್ಲೇ ಅತ್ಯಂತ ನಿಧಾನವಾಗಿ ಚಲಿಸುವ ಪ್ರಾಣಿಗಳಿವು!

Slowest Animals

ಜಗತ್ತಿನಲ್ಲಿ ಹಲವಾರು ವಿಚಿತ್ರಗಳಿವೆ. ಅದನ್ನು ಅನ್ವೇಷಿಸಲು ಹೊರಟರೆ ಒಂದು ಜನ್ಮವೂ ಸಾಕಾಗದು. ಈ ಭೂಮಿ ಮೇಲಿರುವ ಪ್ರತಿಯೊಂದು ಜೀವಯೂ (Animals) ತನ್ನದೇ ಆದ ಜೀವನ ಪದ್ದತಿಯನ್ನು ಹೊಂದಿದೆ. ಅವುಗಳ ನಡಿಗೆಯಿಂದ ಹಿಡಿದು ಆಹಾರ, ಬದುಕುವ ರೀತಿ ಒಂದಕ್ಕಿಂತ ಒಂದು ಸಂಪೂರ್ಣ ಭಿನ್ನವಾಗಿದೆ. ಕೆಲವು ಪ್ರಾಣಿಗಳು ಅತ್ಯಂತ ವೇಗದ ನಡಿಗೆಗೆ ಗುರುತಿಸಲ್ಪಟ್ಟಿದ್ದರೆ ಇನ್ನು ಕೆಲವು ಅತ್ಯಂತ ನಿಧಾನವಾದ ನಡಿಗೆಯಿಂದ (Slowest Animals) ಹೆಸರುವಾಸಿಯಾಗಿದೆ.

ಈ ಜಗತ್ತಿನಲ್ಲಿರುವ ಅತ್ಯಂತ ನಿಧಾನವಾಗಿ ನಡೆಯುವ ಪ್ರಾಣಿಗಳು ಇವೆ. ಅವುಗಳಿಗೆ ಕನಿಷ್ಠ ಒಂದು ಕಿ.ಮೀ. ಪ್ರಯಾಣಿಸಲು ಹಲವಾರು ದಿನಗಳೇ ಬೇಕಾಗುತ್ತದೆ. ಅಂತಹ ಪ್ರಾಣಿಗಳಲ್ಲಿ ಈ ಐದು ಪ್ರಾಣಿಗಳು ಗಂಟೆಗೆ 0.3 ಕಿ.ಮೀ. ನಡೆಯುವುದೇ ಬಹು ಕಷ್ಟದಲ್ಲಿ. ದೈತ್ಯ ಆಮೆಗಳು ಗಂಟೆಗೆ 0.3 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಸಮುದ್ರದಲ್ಲಿರುವ ನಕ್ಷತ್ರ ಮೀನಿಗೆ ನಿಮಿಷಕ್ಕೆ ಕೆಲವು ಸೆಂಟಿ ಮೀಟರ್ ಗಳಷ್ಟು ದೂರಕ್ಕೆ ಮಾತ್ರ ಚಲಿಸಲು ಸಾಧ್ಯವಾಗುತ್ತದೆ. ಇನ್ನು ಬಸವನಹುಳ ಗಂಟೆಗೆ ಸುಮಾರು 0.03 ಕಿ.ಮೀ., 3 ಕಾಲ್ಬೆರಳುಗಳನ್ನು ಹೊಂದಿರುವ ಹಿಮ ಕರಡಿಯು ಗಂಟೆಗೆ 0.24 ಕಿ.ಮೀ ವೇಗದಲ್ಲಿ ಮಾತ್ರ ಚಲಿಸುತ್ತದೆ.

Slowest Animals

ದೈತ್ಯ ಆಮೆಗಳು

ನಿಧಾನ ಮತ್ತು ಸ್ಥಿರವಾಗಿ ಚಲಿಸುವ ಗುಣದಿಂದ ಖ್ಯಾತಿ ಪಡೆದಿರುವ ದೈತ್ಯ ಆಮೆಗಳು 100 ವರ್ಷಗಳಿಗೂ ಹೆಚ್ಚು ಕಾಲ ಬದುಕುತ್ತವೆ. ಆದರೆ ಇವುಗಳಿಗೆ ಗಂಟೆಗೆ ಕೇವಲ 0.3 ಕಿಲೋ ಮೀಟರ್ ಮಾತ್ರ ನಡೆಯಲು ಸಾಧ್ಯ.

Slowest Animals

ಬಸವನಹುಳು

ಅತ್ಯಂತ ನಿಧಾನವಾಗಿ ಚಲಿಸುವ ಪ್ರಾಣಿಗಳಲ್ಲಿ ಬಸವನ ಹುಳು ಕೂಡ ಸೇರಿದೆ. ಇದು ಗಂಟೆಗೆ 0.03 ಕಿಲೋ ಮೀಟರ್ ಮಾತ್ರ ಚಲಿಸಬಲ್ಲದು. ಮೃದುವಾದ ದೇಹ ರಚನೆಯನ್ನು ಹೊಂದಿರುವ ಇವುಗಳು ತಾವು ಹೋದ ಜಗದಲ್ಲಿ ಲೋಳೆಯಂತ ಪದಾರ್ಥವನ್ನು ಬಿಟ್ಟುಹೋಗುತ್ತದೆ.

Slowest Animals

ಹಿಮಕರಡಿ

ಮೂರು ಕಾಲಿನ ಹಿಮಕರಡಿಗಳು ಗಂಟೆಗೆ ಕೇವಲ 0.24 ಕಿ.ಮೀ. ಮಾತ್ರ ಚಲಿಸುತ್ತವೆ. ಮರಗಳ ಮೇಲೆಯೇ ಹೆಚ್ಚಿನ ಸಮಯ ಕಳೆಯುವ ಈ ಪ್ರಾಣಿ ಮರದ ಮೇಲೆ, ಕೆಳಗೆ ಹೋಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ. ಮೂರು ಕಾಲ್ಬೆರಳುಗಳ ಹಿಮಕರಡಿಯು 40 ನಿಮಿಷಗಳ ಕಾಲ ಉಸಿರನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ.

Slowest Animals

ಸಮುದ್ರ ಕುದುರೆ

ಮೀನಿನ ಜಾತಿಗೆ ಸೇರಿದ ಸಮುದ್ರ ಕುದುರೆಯು ಗಂಟೆಗೆ ಕೇವಲ 0.3 ಕಿಲೋಮೀಟರ್ ಮಾತ್ರ ಚಲಿಸುತ್ತವೆ. ಇದನ್ನು ಅತ್ಯಂತ ನಿಧಾನವಾಗಿ ಚಲಿಸುವ ಮೀನು ಎಂದು ಕರೆಯಲಾಗುತ್ತದೆ. ಈ ಪ್ರಾಣಿಗಳ ನಿಧಾನ ಚಲನೆಯು ಅವುಗಳ ಶಕ್ತಿಯಾಗಿರುತ್ತದೆ. ಇದು ಅವುಗಳನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

No Honking City: ಈ ನಗರದಲ್ಲಿ ಕೇಳುವುದೇ ಇಲ್ಲ ಹಾರ್ನ್ ಶಬ್ದ!

ಅಪಾಯದಲ್ಲಿವೆ ಈ ಪ್ರಾಣಿಗಳು

ನಿಧಾನವಾಗಿ ಚಲಿಸುವ ಗುಣದಿಂದಲೇ ಹೆಸರುವಾಸಿಯಾಗಿರುವ ಈ ಪ್ರಾಣಿಗಳು ಪರಭಕ್ಷಕ ಪ್ರಾಣಿಗಳಿಂದ ಅಪಾಯವನ್ನು ಎದುರಿಸುವ ಕಾರಣದಿಂದ ಪರಿಸರದಲ್ಲಿ ಹೆಚ್ಚಾಗಿ ಅವಿತುಕೊಂಡೇ ಬದುಕುತ್ತವೆ. ಪ್ರಾಕೃತಿಕ ವಿಕೋಪ, ಆವಾಸಸ್ಥಾನದ ನಷ್ಟ, ಪರಭಕ್ಷಕ ಪ್ರಾಣಿಗಳ ಹಾವಳಿಯಿಂದ ಬಹುತೇಕ ನಿಧಾನವಾಗಿ ಚಲಿಸುವ ಪ್ರಾಣಿಗಳು ಅಳಿವಿನಂಚಿನಲ್ಲಿವೆ.