Thursday, 26th December 2024

Smuggler Sunil Yadav:‌ ಶೂಟೌಟ್‌ನಲ್ಲಿ ಸ್ಮಗ್ಲರ್ ಸುನಿಲ್ ಯಾದವ್ ಬಲಿ; ಲಾರೆನ್ಸ್‌ ಬಿಷ್ಣೋಯ್‌ ಆಪ್ತನಿಂದ ಕೃತ್ಯ?

ನ್ಯೂಯಾರ್ಕ್: ಅಮೆರಿಕದ(United States) ಕ್ಯಾಲಿಫೋರ್ನಿಯಾದ(California) ಸ್ಟಾಕ್‌ಟನ್(Stockton) ನಗರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಡ್ರಗ್ಸ್ ಸ್ಮಗ್ಲರ್ ಸುನಿಲ್ ಯಾದವ್(Smuggler Sunil Yadav) ಹತನಾಗಿದ್ದಾನೆ ಎಂದು ತಿಳಿದು ಬಂದಿದೆ.

ಡ್ರಗ್ಸ್‌ ಸ್ಮಗ್ಲರ್‌ ಸುನಿಲ್‌ ಯಾದವ್‌ ನ ಹತ್ಯೆಯಾಗಿದ್ದು, ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್‌ ಬಿಷ್ಣೋಯ್‌ನ(Lawrence Bishnoi) ಆಪ್ತ ಸಹಾಯಕ ದರೋಡೆಕೋರ ರೋಹಿತ್ ಗೋಡಾರಾ(Rohit Godara) ಸುನೀಲ್ ಯಾದವ್ನನ್ನು ಗುಂಡಿಕ್ಕಿ ಹತ್ಯೆಗೈದಿರುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು,ಸೇಡು ತೀರಿಸಿಕೊಂಡಿದ್ದೇನೆ ಎಂದಿದ್ದಾನೆ ಎಂದು ಹೇಳಲಾಗಿದೆ.

ಸುನೀಲ್ ಯಾದವ್ ಕುಖ್ಯಾತ ಕಳ್ಳಸಾಗಾಣಿಕೆದಾರನಾಗಿದ್ದು, ರಾಜಸ್ಥಾನದಲ್ಲಿ ಹಲವು ಪ್ರಕರಣಗಳ ಆರೋಪಿಯಾಗಿದ್ದ. ವರದಿಗಳ ಪ್ರಕಾರ, ಅವನು ಪಾಕಿಸ್ತಾನ ಮಾರ್ಗದ ಮೂಲಕ ಭಾರತಕ್ಕೆ ಡ್ರಗ್ಸ್ ತಲುಪಿಸುತ್ತಿದ್ದನು ಎಂದು ತಿಳಿದುಬಂದಿದೆ. ಕೆಲವು ವರ್ಷಗಳ ಹಿಂದೆ 300 ಕೋಟಿ ರುಪಾಯಿ ಮೌಲ್ಯದ ಮಾದಕವಸ್ತು ಸಾಗಾಟ ಸಂಬಂಧಿಸಿದಂತೆ ಅವನ ಹೆಸರು ಕೇಳಿಬಂದಿತ್ತು ಎಂಬ ಮಾಹಿತಿಯಿದೆ.

ಸುನಿಲ್ ಯಾದವ್ ಎರಡು ವರ್ಷಗಳ ಹಿಂದೆ ರಾಹುಲ್ ಎಂಬ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಅಮೆರಿಕ ದೇಶಕ್ಕೆ ಪರಾರಿಯಾಗಿದ್ದನು. ಸುನಿಲ್ ಯಾದವ್ ಈ ಹಿಂದೆ ದುಬೈನಲ್ಲಿ ವಾಸಿಸುತ್ತಿದ್ದನು. ರಾಜಸ್ಥಾನ ಪೊಲೀಸರು ದುಬೈನಲ್ಲಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಅವನನ್ನು ಅಲ್ಲಿಂದಲೇ ಬಂಧಿಸಿ ಕರೆತರಲಾಗಿತ್ತು. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಆಭರಣ ವ್ಯಾಪಾರಿ ಪಂಕಜ್ ಸೋನಿ ಹತ್ಯೆಗೆ ಸಂಬಂಧಿಸಿದಂತೆ ಅವನನ್ನು ಬಂಧಿಸಲಾಗಿತ್ತು.  ಆದರೆ ಜಾಮೀನಿನ ಮೇಲೆ ಸುನಿಲ್‌ ಯಾದವ್‌ ಹೊರಗಿದ್ದನು.

ಕ್ಯಾಲಿಫೋರ್ನಿಯಾ ಪೊಲೀಸರು ಮತ್ತು ಭಾರತೀಯ ಅಧಿಕಾರಿಗಳು ಈಗ ಸುನಿಲ್ ಯಾದವ್ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅವನು ಭಾರತದಿಂದ ಅಮೆರಿಕ ದೇಶಕ್ಕೆ ಪಲಾಯನ ಮಾಡಿ ಹಲವು ವರ್ಷಗಳಾದ ನಂತರ ಅವನನ್ನು ಹೇಗೆ ಗುಂಡಿಕ್ಕಿ ಕೊಲ್ಲಲಾಯಿತು ಮತ್ತು ಕೊಲೆಯ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ ಎನ್ನಲಾಗಿದೆ.

ಸೇಡು ತೀರಿಸಿಕೊಂಡಿದ್ದೇನೆ ಎಂದ ಬಿಷ್ಣೋಯ್‌ ಆಪ್ತ

ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್‌ ಬಿಷ್ಣೋಯ್‌ನ ಆಪ್ತ ಸಹಾಯಕ ದರೋಡೆಕೋರ ರೋಹಿತ್ ಗೋಡಾರಾ ಸುನಿಲ್ ಯಾದವ್ ನನ್ನು ಗುಂಡಿಕ್ಕಿ ಹತ್ಯೆಗೈದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾನೆ. ಸೇಡು ತೀರಿಸಿಕೊಂಡಿದ್ದೇನೆ ಅಂತಲೂ ಹೇಳಿದ್ದಾನೆ. ಸುನಿಲ್‌ ಯಾದವ್‌ ಮೂಲತಃ ಪಂಜಾಬ್‌ನ ಫಜಿಲ್ಕಾ ಜಿಲ್ಲೆಯ ಅಬೋಹರ್‌ನವನು. ಅವನು ಈ ಹಿಂದೆ ಬಿಷ್ಣೋಯ್ ಮತ್ತು ಗೋದಾರಾ ಇಬ್ಬರಿಗೂ ನಿಕಟನಾಗಿದ್ದನು ಎಂದು ಹೇಳಲಾಗುತ್ತದೆ. ಅಂಕಿತ್ ಭಾದು ಹತ್ಯೆಗೆ ಸಂಬಂಧಿಸಿದಂತೆ ಸುನಿಲ್‌ ವಿರುದ್ಧ ಪ್ರಕರಣ ದಾಖಲಾಗಿತ್ತು.

“ನನ್ನ ಸಹೋದರ ಅಂಕಿತ್ ಭಾದುನನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲು ಪಂಜಾಬ್ ಪೊಲೀಸರೊಂದಿಗೆ ಕೆಲಸ ಮಾಡಿದ್ದಾನೆ. ನಾವು ಅವನ ಪ್ರತೀಕಾರ ತೀರಿಸಿಕೊಂಡಿದ್ದೇವೆ” ಎಂದು ಲಾರೆನ್ಸ್‌ ಬಿಷ್ಣೋಯ್‌ ಆಪ್ತ ರೋಹಿತ್‌ ಹೇಳಿದ್ದಾನೆ. ಅಂಕಿತ್ ಭಾದು ಎನ್‌ಕೌಂಟರ್ ಸಾವಿನಲ್ಲಿ ಯಾದವ್ ಭಾಗಿಯಾಗಿದ್ದಾನೆ ಎಂಬ ಸುದ್ದಿ ಹೊರ ಬಿದ್ದೊಡನೆ ಯಾದವ್ ದೇಶದಿಂದ ಓಡಿಹೋದ ಎಂದು ಗೋದಾರಾ ಹೇಳಿದ್ದಾನೆ.

ಈ ಸುದ್ದಿಯನ್ನೂ ಓದಿ:No Detention Policy: 5, 8ನೇ ತರಗತಿಯಲ್ಲಿ ಫೇಲ್‌ ಆದ ವಿದ್ಯಾರ್ಥಿಗಳಿಗೆ ಇನ್ನು ಮುಂದುವರಿಕೆ ಇಲ್ಲ