ನವದೆಹಲಿ: ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಜಾಗತಿಕವಾಗಿ ಡೌನ್ ಆಗಿದೆ.
ಹೊಸ ಟ್ವೀಟ್‌ಗಳ ಪೋಸ್ಟ್ ಮಾಡಲು ಪ್ರಯತ್ನಿಸುತ್ತಿರುವ ಕೆಲವು ಬಳಕೆದಾರರು, ‘ನೀವು ಟ್ವೀಟ್‌ಗಳನ್ನು ಕಳುಹಿಸುವ ದೈನಂದಿನ ಮಿತಿಯನ್ನು ಮೀರಿದ್ದೀರಿ’ ಎಂದು ಹೇಳುವ ಪಾಪ್-ಅಪ್ ಅನ್ನು ಸ್ವೀಕರಿಸಿರುವುದಾಗಿ ಹೇಳಿಕೊಂಡಿದ್ದಾರೆ.
‘ನಿಮ್ಮಲ್ಲಿ ಕೆಲವರಿಗೆ ಟ್ವಿಟರ್ ನಿರೀಕ್ಷೆಯಂತೆ ಕೆಲಸ ಮಾಡದೇ ಇರಬಹುದು. ತೊಂದರೆಗಾಗಿ ಕ್ಷಮಿಸಿ. ಇದನ್ನು ಸರಿಪಡಿಸಲು ನಾವು ಕೆಲಸ ಮಾಡುತ್ತಿದ್ದೇವೆ, ‘ಎಂದು ಕಂಪನಿಯು ಟ್ವೀಟ್ ಮಾಡಿದೆ.
12,000 ಕ್ಕೂ ಹೆಚ್ಚು ಫೇಸ್‌ಬುಕ್ ಬಳಕೆದಾರರು ದೋಷಗಳನ್ನು ವರದಿ ಮಾಡಿದ್ದಾರೆ ಮತ್ತು Instagram ನಲ್ಲಿ ಸುಮಾರು 7,000 ಘಟನೆಗಳು ವರದಿಯಾಗಿವೆ.