Friday, 20th September 2024

ಬರೋಡಾ ಬೈಎಲೆಕ್ಷನ್: ಕ್ರೀಡಾಪಟು ಯೋಗೇಶ್ವರ್ ದತ್ ಕಣದಲ್ಲಿ

ಚಂಡಿಗಢ್: ಒಲಂಪಿಕ್ ಪದಕ ವಿಜೇತ ಯೋಗೇಶ್ವರ್ ದತ್ ಬಿಜೆಪಿಯಿಂದ ಬರೋಡಾ ವಿಧಾನಸಭೆ ಉಪ ಚುನಾವಣಾ ಕ್ಷೇತ್ರ ದಿಂದ ಕಣಕ್ಕಿಳಿಯು ತ್ತಿದ್ದಾರೆ.

ಕುಸ್ತಿಪಟು ಯೋಗೇಶ್ವರ್ ದತ್ ನವೆಂಬರ್ 3 ರಂದು ನಡೆಯುವ ಸೋನಿಪಟ್ ನ ಬರೋಡಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದೆ. ಕಳೆದ ಏಪ್ರಿಲ್ ನಲ್ಲಿ ಕಾಂಗ್ರೆಸ್ ನ ಶ್ರೀ ಕೃಷನ್ ಹೂಡಾ ಅವರ ನಿಧನ ದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಮುಖ್ಯಸ್ಥ ಅಮಿತ್ ಶಾ ಮತ್ತು ಹಿರಿಯ ಮುಖಂಡರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮೂರು ಗಂಟೆಗಳ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದರು. ಒಂದು ದಿನದ ನಂತರ ಈಗ ಅಭ್ಯರ್ಥಿಗಳ ಪಟ್ಟಿ ಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಮಂತ್ರಿಗಳಾದ ಬಾದ್‌ಶಾಹಪುರದ ರಾವ್ ನರ್ಬೀರ್ ಸಿಂಗ್ ಮತ್ತು ಫರಿದಾಬಾದ್‌ನ ವಿಪುಲ್ ಗೋಯಲ್ ಅವರಿಗೆ ಟಿಕೆಟ್ ಲಭಿಸಿಲ್ಲ ಎನ್ನಲಾಗಿದೆ.