Friday, 22nd November 2024

Star Ramp Walk: 24 ಕ್ಯಾರೆಟ್‌ ಗೋಲ್ಡ್ ವಿನ್ಯಾಸದ ಮಣಿಪುರಿ ಉಡುಗೆಯಲ್ಲಿ ಊರ್ವಶಿ ರೌಟಾಲಾ ರ‍್ಯಾಂಪ್‌ ವಾಕ್‌

Star Ramp Walk

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಾಲಿವುಡ್‌ ನಟಿ ಊರ್ವಶಿ ರೌಟಾಲಾ (Urvashi Rautela), 24 ಕ್ಯಾರೆಟ್‌ ಗೋಲ್ಡ್‌ನಿಂದಲೇ ವಿನ್ಯಾಸಗೊಳಿಸಲಾದ ಮಣಿಪುರ್‌ನ ಟ್ರೆಡಿಷನಲ್‌ ಡಿಸೈನರ್‌ವೇರ್‌ (Traditional designer wear) ಪಾಟ್ಲಾಯ್‌ನಲ್ಲಿ ಗ್ಲೋಬಲ್‌ ಇಂಡಿಯಾ ಕಾಚರ್‌ ವೀಕ್‌ನಲ್ಲಿ ರ‍್ಯಾಂಪ್‌ ವಾಕ್‌ (Star Ramp Walk) ಮಾಡಿದ್ದಾರೆ. ಹೌದು. ಮುಡಿಯಿಂದಿಡಿದು ಪಾದದವರೆಗೆ ಸಾಂಪ್ರದಾಯಿಕ ಮಣಿಪುರ್‌ನ ಟ್ರೆಡಿಷನಲ್‌ ಅಟೈರ್‌ ಪಾಟ್‌ಲಾಯ್‌ನಲ್ಲಿ ನಟಿ ಊರ್ವಶಿ ಕಾಣಿಸಿಕೊಂಡಿದ್ದು, ಫ್ಯಾಷನ್‌ ಲೋಕದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಊರ್ವಶಿ ರೌಟಾಲಾ, ಬಾಲಿವುಡ್‌ ನಟಿ

ಡಿಸೈನರ್‌ ರಾಬರ್ಟ್ ನೌರೆಮ್‌ ಡಿಸೈನರ್‌ವೇರ್‌

ಊರ್ವಶಿ ಅವರನ್ನು ಮನಮೋಹಕವಾಗಿಸಿರುವ ಈ ಅಟೈರ್‌ ಸಿದ್ಧಪಡಿಸಿರುವುದು, ಅಲ್ಲಿನ ಸ್ಥಳೀಯ ಸೆಲೆಬ್ರಿಟಿ ಡಿಸೈನರ್‌ ರಾಬರ್ಟ್ ನೌರೆಮ್‌. ಅಚ್ಚ ಕೆಂಪು ಬಣ್ಣದ ಈ ಉಡುಗೆಯನ್ನು 24 ಕ್ಯಾರೆಟ್‌ ಬಂಗಾರದಿಂದಲೇ ಡಿಸೈನ್‌ ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ಬಾರ್ಡರ್‌ ಜಾಗದಲ್ಲೂ ಬಂಗಾರವನ್ನೇ ಬಳಸಿದ್ದಾರೆ. ಮಣಿಪುರದಲ್ಲಿ ಮದುಮಗಳು ಧರಿಸುವ ಆಭರಣಗಳಿಂದ ಸಿಂಗರಿಸಿದ್ದಾರೆ. ಹಾಗಾಗಿ, ಇದು ಜ್ಯುವೆಲ್‌ ಡಿಸೈನರ್‌ವೇರ್‌ ಎಂದರೂ ಅತಿಶಯೋಕ್ತಿಯಾಗದು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಾನ್‌.

ಚಿತ್ರಕೃಪೆ: ರಾಬರ್ಟ್ ನೌರೋಮ್‌, ಸೆಲೆಬ್ರಿಟಿ ಡಿಸೈನರ್‌

ಇನ್ನು ಡಿಸೈನರ್‌ ರಾಬರ್ಟ್ ಅವರು ಹೇಳುವಂತೆ, ಬಂಗಾರದ ಎಂಬಾಲಿಶ್ಡ್ ಡಿಸೈನ್‌ನಿಂದ ಸಿದ್ಧಪಡಿಸಿಲಾದ ಈ ಟ್ರೆಡಿಷನಲ್‌ ಮಣಿಪುರ್‌ ಡಿಸೈನರ್‌ನಲ್ಲಿ ನಟಿ ಊರ್ವಶಿ ರೌತೆಲಾ, ಥೇಟ್‌ ನಮ್ಮ ಮಣಿಪುರದ ದೇವತೆಯಂತೆ ಕಾಣಿಸುತ್ತಿದ್ದಾಳೆ ಎಂದು ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ಕಲಾತ್ಮಕ ವಿನ್ಯಾಸದಿಂದ ಕೂಡಿದ ಮಣಿಪುರಿ ಉಡುಗೆಯಿದು

ಫ್ಯಾಷನಿಸ್ಟ್‌ ರಜತ್‌ ಹೇಳುವಂತೆ, ಡಿಸೈನರ್‌ ರಾಬರ್ಟ್‌ ನೆರೋಮ್‌ ಅವರು ಮೂಲತಃ ಮಣಿಪುರದ ಡಿಸೈನರ್‌ ಹಾಗಾಗಿ ಅವರ ಸ್ಥಳೀಯ ಕಲಾತ್ಮಕ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸುವಲ್ಲಿ ಎತ್ತಿದ ಕೈ. ಪ್ರತಿ ಬಾರಿಯು ಟ್ರೆಡಿಷನಲ್‌ವೇರನ್ನು ಡಿಫರೆಂಟಾಗಿ ಪ್ರಸ್ತುತಪಡಿಸುತ್ತಾರೆ. ಅಲ್ಲದೇ, ಉಡುಗೆಯನ್ನು ಧರಿಸಿದ ಸೆಲೆಬ್ರಿಟಿಯು ಕೂಡ ಅತ್ಯಾಕರ್ಷಕವಾಗಿ ಕಾಣುವಂತೆ ಬಿಂಬಿಸುತ್ತಾರೆ ಎನ್ನುತ್ತಾರೆ.

ಈ ಸುದ್ದಿಯನ್ನೂ ಓದಿ | Designer Velvet Gown Fashion: ಸೆಲೆಬ್ರಿಟಿ ಲುಕ್‌‌‌ಗೆ ಸಾಥ್‌ ನೀಡುವ ವೆಲ್ವೆಟ್‌ ಡಿಸೈನರ್‌ ಗೌನ್‌

ಮಣಿಪುರಿ ಉಡುಗೆಯ ಬಗ್ಗೆ ಊರ್ವಶಿ ಸಂತಸ

ಮಣಿಪುರಿ ಟ್ರೆಡಿಷನಲ್‌ ಅಟೈರ್‌ನಲ್ಲಿ ಶೋ ಸ್ಟಾಪರ್‌ ಆಗಿ ರ‍್ಯಾಂಪ್‌ ವಾಕ್‌ ಮಾಡಿದ ನಟಿ ಊರ್ವಶಿ ರೌಟಾಲಾ ಕೂಡ, ಈ ಡಿಸೈನರ್‌ವೇರ್‌ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಡಿಸೈನರ್‌ ಕೈಚಳಕದ ಬಗ್ಗೆ ಮಾಧ್ಯಮಗಳ ಮುಂದೆ ಪ್ರಶಂಸೆಗೈದಿದ್ದಾರೆ. ಈ ಉಡುಗೆಯ ಒಂದೊಂದು ಡಿಸೈನ್‌ ಕೂಡ ಡಿಸೈನರ್‌ನ ಕಲಾತ್ಮಕ ಚಿಂತನೆಗೆ ಸಾಕ್ಷಿಯಾಗಿದೆ ಎಂದು ಅವರನ್ನು ಹಾಡಿ ಹೊಗಳಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)