ಮುಂಬೈ: ಮುಕೇಶ್ ಅಂಬಾನಿ ಅವರ ಜಿಯೊ ಫೈನಾನ್ಷಿಯಲ್ ಸರ್ವೀಸ್, ಜೊಮ್ಯಾಟೊ, ಹಿಂದೂಸ್ತಾನ್ ಏರೊನಾಟಿಕ್ಸ್ ಅಥವಾ ಎಚ್‌ಎಎಲ್ ಷೇರುಗಳು ಬಿಎಸ್‌ಇ ಸೆನ್ಸೆಕ್ಸ್ 50 ಇಂಡೆಕ್ಸ್‌ಗೆ ಸೇರ್ಪಡೆಯಾಗಲಿದೆ. ಎಚ್‌ಡಿಎಫ್‌ಸಿ ಲೈಫ್ ಇನ್ಷೂರೆನ್ಸ್ ಕಂಪೆನಿ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಎಲ್‌ಟಿಐ ಮೈಂಡ್ ಟ್ರಿ ಕಂಪನಿಯ ಷೇರುಗಳು ಬಿಎಸ್‌ಇ ಸೆನ್ಸೆಕ್ಸ್ 50 ಇಂಡೆಕ್ಸ್‌ನಿಂದ ಹೊರಗೆ ಹೋಗಲಿದೆ. ಡಿ. 23ಕ್ಕೆ ಈ ಬದಲಾವಣೆ ನಡೆಯಲಿದೆ. ಬಿಎಸ್‌ಇ ಸೆನ್ಸೆಕ್ಸ್ 50 ಇಂಡೆಕ್ಸ್‌ನಲ್ಲಿ ಬಿಎಸ್‌ಇ ಲಾರ್ಜ್ ಮಿಡ್ ಕ್ಯಾಪ್‌ನಲ್ಲರುವ 50 ಪ್ರಮುಖ ಷೇರುಗಳನ್ನು ಸೇರಿಸಲಾಗುತ್ತದೆ. 2016ರ ಡಿಸೆಂಬರ್‌ನಲ್ಲಿ ಈ ಸೂಚ್ಯಂಕ ಆರಂಭವಾಯಿತು (Stock Market).
ಅದಾನಿ ಸ್ಟಾಕ್‌ಗಳಿಗೆ ಮೂಡೀಸ್ ಹೊಡೆತ
ಅಮೆರಿಕದಲ್ಲಿ ಲಂಚದ ಆರೋಪ ಪ್ರಕರಣ ಎದುರಿಸುತ್ತಿರುವ ಅದಾನಿ ಗ್ರೂಪ್‌ನ ಕಂಪೆನಿಗಳಿಗೆ ಇದೀಗ ಮೂಡೀಸ್ ರೇಟಿಂಗ್ಸ್ ಹೊಡೆತ ಕೊಟ್ಟಿದೆ. ಮೂಡೀಸ್ ರೇಟಿಂಗ್ಸ್, ಅದಾನಿ ಗ್ರೂಪ್‌ನ ಏಳು ಕಂಪೆನಿಗಳ ರೇಟಿಂಗ್ ಅನ್ನು ಸ್ಟೇಬಲ್‌ನಿಂದ ನೆಗೆಟಿವ್‌ಗೆ ಇಳಿಸಿದೆ. ಫಿಚ್ ಕೂಡ ಕೆಲವು ಅದಾನಿ ಕಂಪೆನಿಗಳ ರೇಟಿಂಗ್ ಅನ್ನು ನೆಗೆಟಿವ್‌ಗೆ ಇಳಿಸಿದೆ. ಅಮೆರಿಕದ ಪ್ರಕರಣದಿಂದ ಅದಾನಿ ಗ್ರೂಪ್‌ಗೆ ಹೊಸ ಸಾಲ ಮತ್ತು ಫಂಡ್ ಸಂಗ್ರಹಿಸುವುದು ಕಷ್ಟವಾಗಲಿದೆ ಅಥವಾ ದುಬಾರಿಯಾಗಲಿದೆ ಎಂದು ಈ ರೇಟಿಂಗ್ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ. ಆದರೆ ಮುಂದಿನ 12 ತಿಂಗಳಿನ ತನಕ ಅದಾನಿ ಕಂಪೆನಿಗಳ ಸಾಲ ಮರು ಪಾವತಿಗೆ ಬೇಕಾದಷ್ಟು ಫಂಡ್ ಇದೆ ಎಂದು ಅದಾನಿ ಗ್ರೂಪ್ ತಿಳಿಸಿದೆ.
ಈ 5 ಸ್ಟಾಕ್‌ಗಳಲ್ಲಿ 51% ತನಕ ಲಾಭ ನಿರೀಕ್ಷೆ
- ಪಿಎನ್‌ಸಿ ಇನ್‌ಫ್ರಾಟೆಕ್ ಷೇರಿನ ಈಗಿನ ದರ 299 ರೂ.ಗಳಾಗಿದ್ದು, ಮುಂದಿನ 1 ವರ್ಷದಲ್ಲಿ 51% ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಸೆಂಟ್ರುಮ್ ಬ್ರೋಕಿಂಗ್ ತಿಳಿಸಿದೆ.
- ಕಾಲ್ಗೇಟ್ ಪಾಮೊಲಿವ್ ಷೇರಿನ ಈಗಿನ ದರ 2,709 ರೂ.ಗಳಾಗಿದ್ದು, 1 ವರ್ಷದಲ್ಲಿ 41% ಏರಿಕೆಯಾಗುವ ನಿರೀಕ್ಷೆ ಇದೆ ಎಂದು ನುವಾಮಾ ರಿಸರ್ಚ್ ಹೌಸ್ ತಿಳಿಸಿದೆ.
- ಮುತ್ತೂಟ್ ಫೈನಾನ್ಸ್ ಷೇರಿನ ಈಗಿನ ದರ 1,778 ರೂ.ಗಳಾಗಿದ್ದು, ಮುಂದಿನ 1 ವರ್ಷದಲ್ಲಿ 26% ಹೆಚ್ಚಳವಾಗಬಹುದು ಎಂದು ಸಿಸ್ಟೆಮ್ಯಾಟಿಕ್ಸ್ ಸಂಸ್ಥೆ ತಿಳಿಸಿದೆ.
- ಮೆಡ್‌ಪ್ಲಸ್ ಹೆಲ್ತ್ ಸರ್ವೀಸ್ ಷೇರಿನ ದರ 684 ರೂ.ಗಳಾಗಿದ್ದು, 21% ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
- ನ್ಯಾಶನಲ್ ಅಲ್ಯುಮಿನಿಯಂ ಷೇರಿನ ಈಗಿನ ದರ 265 ರೂ.ಗಳಾಗಿದ್ದು, ಮುಂದಿನ 1 ವರ್ಷದಲ್ಲಿ 20% ಏರಿಕೆಯಾಗಬಹುದು ಎಂದು ಆಂಟಿಕ್ ಸ್ಟಾಕ್ ರಿಸರ್ಚ್ ಸಂಸ್ಥೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Reliance Shares: 24 ವರ್ಷದ ಹಿಂದೆ ರಿಲಯನ್ಸ್ ಷೇರಿನಲ್ಲಿ 10,000 ರೂ. ಹೂಡಿದ್ದರೆ ಈಗ ಎಷ್ಟಾಗುತ್ತಿತ್ತು? ಇಲ್ಲಿದೆ ಲೆಕ್ಕಾಚಾರ