Thursday, 12th December 2024

ಇಂಧನ ಬೆಲೆ ಏರಿಕೆ ವಿರೋಧಿಸಿ: ಇಂದಿನಿಂದ ಎರಡು ದಿನ ಮುಷ್ಕರ

#Petrol #Diesel

ನವದೆಹಲಿ: ಇಂಧನ ಬೆಲೆಯಲ್ಲಿನ ಏರಿಕೆ ವಿರೋಧಿಸಿ ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರ ಸಂಘಗಳ ಸದಸ್ಯರು ಸೋಮವಾರದಿಂದ ಎರಡು ದಿನ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಆಟೋ ಹಾಗೂ ಕ್ಯಾಬ್ ಚಾಲಕರ ಹಲವಾರು ಒಕ್ಕೂಟಗಳು ಪ್ರಯಾಣ ದರ ಹೆಚ್ಚಿಸಬೇಕು ಹಾಗೂ ಇಂಧನ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸುತ್ತಿವೆ.

ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸರಕಾರ ಭರವಸೆ ನೀಡಿದರೂ ಮುಷ್ಕರ ಹಿಂಪಡೆದಿಲ್ಲ. ನಿಗದಿತ ಸಮಯಕ್ಕೆ ಅನುಗುಣವಾಗಿ ದರ ಪರಿಷ್ಕರಣೆಗಾಗಿ ಸಮಿತಿ ರಚಿಸುವುದಾಗಿ ಸರಕಾರ ಘೋಷಿಸಿತ್ತು.

ಭಾರತೀಯ ಮಜ್ದೂರ್ ಸಂಘದ ಘಟಕವಾದ ದಿಲ್ಲಿಯ ಆಟೋ ಹಾಗೂ ಟ್ಯಾಕ್ಸಿ ಅಸೋಸಿಯೇಶನ್ ಏ.18 ಹಾಗೂ 19 ರಂದು ದಿಲ್ಲಿಯಲ್ಲಿ ಮುಷ್ಕರ ವನ್ನು ಘೋಷಿಸಿದೆ. ಎರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಆಟೋ ಗಳು ಹಾಗೂ ಕ್ಯಾಬ್‌ಗಳು ದಿಲ್ಲಿಯ ರಸ್ತೆಗಿಳಿಯುವುದಿಲ್ಲ ಎಂದು ಅದು ಹೇಳಿದೆ.